ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರಿಯಜ್ಜನ ಹಾಡು ಫೇಮಸ್- ಅತ್ಯಧಿಕ ವೀಕ್ಷಣೆ

ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ಬಗ್ಗೆ ಬಾಲಕನೊಬ್ಬ ಹಾಡಿದ ಈ ಹಾಡು ಹಲವು ದಿನಗಳಿಂದ ಈಚೆಗೆ ತುಳುನಾಡು ಅಷ್ಟೇ ಅಲ್ಲ ಎಲ್ಲೆಡೆ ದೈವಾರಾಧಕರನ್ನು ಮನಸೂರೆಗೊಳಿಸಿದೆ. ಒಂದೇ ವಾರದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಈ ಹಾಡನ್ನು ವೀಕ್ಷಿಸಿ ಲೈಕ್‌ ಮಾಡಿದ್ದಾರೆ.

ಕಾರ್ಕಳ ಹಿರ್ಗಾನ ಗ್ರಾಮದ ನುಜೂರು ಪೂವಪ್ಪ-ಲೋಲಾಕ್ಷಿ ದಂಪತಿಯ 7ವರ್ಷದ ಮಗ ಕಾರ್ತಿಕ್‌ ಗಾಯನ ಮೋಡಿಗೆ ಮನಸೋಲದವರಿಲ್ಲ. ಈತನಿಗೆ ಬಾಲ್ಯದಿಂದಲೂ ಭಕ್ತಿಗೀತೆ ಹಾಡುವಲ್ಲಿ ವಿಶೇಷ ಆಸಕ್ತಿ. ಈ ಹಿಂದೆ ಮಂತ್ರದೇವತೆ ಸೇರಿದಂತೆ ನಾನಾ ಭಕ್ತಿಗೀತೆಗಳನ್ನು ಹಾಡಿದ್ದಾನೆ. ಆದ್ರೆ ಈತ ಯಾವುದೇ ಸಂಗೀತ ಶಾಲೆಗೆ ಹೋಗಿಲ್ಲ. ಅಕ್ಷರಾಭ್ಯಾಸವೂ ವಿಶೇಷವಾಗಿ ಇಲ್ಲ. ತನ್ನ ಅಕ್ಕ ರಕ್ಷಿತಾಳ ಮೊಬೈಲ್‌ ಸಹಾಯದಿಂದ ಸಂಗೀತ ಜ್ಞಾನ ಅರಿತುಕೊಂಡಿದ್ದಾನೆ.

ಮಾ. ಕಾರ್ತಿಕ್‌ ಹಾಡಿದ ಕಡಲಪುಡೆತ ಉಡಲಗೇನ ತುಡರ್‌ ಈ ಅಜ್ಜ... ಆ ಸತ್ಯದ ಹಾದಿಗ್‌... ಧರ್ಮೊದ ಸಾದಿಗ್‌ ಪುದರ್‌ ಕೊರಗಜ್ಜ... ಹಾಡನ್ನು ಆತನ ಅಕ್ಕ ರಕ್ಷಿತಾ ಸ್ಟೇಟಸ್‌ನಲ್ಲಿ ಹಾಕಿದ್ದರು. ಈ ಹಾಡಿಗೆ ಮರುಳಾದ ಸಂಬಂಧಿಕರು ಅದನ್ನು ಪಡೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಆ ಹಾಡಿನ ದೃಶ್ಯ ಕೆಲವೇ ಕೆಲವು ಗಂಟೆಗಳಲ್ಲಿ ಸೂಪರ್‌ ಹಿಟ್‌ ಆಗಿ ನೂರಾರು ಮಂದಿ ಶೇರ್‌, ಲೈಕ್‌ ಮಾಡಿದ್ದರು.

Edited By : Nagaraj Tulugeri
Kshetra Samachara

Kshetra Samachara

15/11/2020 04:34 pm

Cinque Terre

15.46 K

Cinque Terre

5