ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅ.2 ರಂದು 31,679 ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ಉಡುಪಿ: ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ‌ ವತಿಯಿಂದ ಉಡುಪಿ ಜಿಲ್ಲೆಯ 350 ಸರಕಾರಿ, ಅನುದಾನಿತ ಶಾಲೆಗಳ 31,679 ವಿದ್ಯಾರ್ಥಿಗಳಿಗೆ ಸಮವಸ್ತ್ರ‌ ವಿತರಿಸಲಾಗುವುದು ಎಂದು ಸೊಸೈಟಿ‌ ಉಪಾಧ್ಯಕ್ಷ ಹೆಚ್.ನಾಗರಾಜ ಶೆಟ್ಟಿ‌ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ‌ ಮಾತನಾಡಿ, ಅ.2,ಬೆಳಗ್ಗೆ 11ಗಂಟೆಗೆ ಅಂಬಾಗಿಲು ಅಮೃತ್‌ ಗಾರ್ಡನ್ ನಲ್ಲಿ ನಡೆಯುವ‌ ಸಮವಸ್ತ್ರ ವಿತರಣಾ‌ ಸಮಾರಂಭವನ್ನು ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ‌ ಸಚಿವ ವಿ.ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ದುಡಿಮೆಯ ಒಂದು ಭಾಗವನ್ನು ಸಾಮಾಜಿಕ ಮೌಲ್ಯದ ಕಾರ್ಯಕ್ರಮಗಳಿಗೆ ನೀಡುವ ನಿಟ್ಟಿನಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ‌ ಚಾರಿಟೇಬಲ್ ಸೊಸೈಟಿ ಸ್ಥಾಪಿಸಿದ್ದು 31,679 ಉಚಿತ ಸಮವಸ್ತ್ರಗಳಿಗೆ 1.75ಕೋಟಿ ರೂ.ವ್ಯಯಿಸಲಾಗುತ್ತಿದೆ ಎಂದರು.‌ ಸಂಘಟನಾ ಕಾರ್ಯದರ್ಶಿ ರಾಜೀವ ಶೆಟ್ಟಿ, ಕೃಷ್ಣ ಪೂಜಾರಿ, ನಿಧಿ ಹೆಗ್ಡೆ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

30/09/2022 07:42 am

Cinque Terre

6.93 K

Cinque Terre

0

ಸಂಬಂಧಿತ ಸುದ್ದಿ