ಮುಲ್ಕಿ: ಮುಲ್ಕಿ ಸಮೀಪದ ಕೊಲಕಾಡಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮುಂಬೈಯ ಸ್ಪಾನ್ ಮೆರೀನ್ ಸರ್ವೀಸಸ್ ಮಾಲಕರಾದ ಪ್ರತಿಭಾ ರಾಜ್ ರವರು ಸಮವಸ್ತ್ರವನ್ನು ವಿತರಣೆ ಮಾಡಿದರು. ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯ ಅಂಬರೀಶ ಲಮಾಣಿ ಮಾತನಾಡಿ ಮಕ್ಕಳ ಕಲಿಕೆಗೆ ಪ್ರೋತ್ಸಾಹ ಶ್ಲಾಘನೀಯವಾಗಿದ್ದುಮಕ್ಕಳಿಗೆ ಸತತವಾಗಿ 8 ವರ್ಷದಿಂದ ಸಮವಸ್ತ್ರವನ್ನು ಅವರ ಸೋದರ ಸತೀಶ್ ಶೆಟ್ಟಿಯವರ ಮುಖಾಂತರ ನೀಡುತ್ತಾ ಬಂದಿರುತ್ತಾರೆ ಎಂದರು. ಈ ಸಂದರ್ಭ ಶಾಲೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು
Kshetra Samachara
09/09/2022 04:34 pm