ಮಣಿಪಾಲ: ಉಡುಪಿ ಜಿಲ್ಲೆ ರಜತ ಮಹೋತ್ಸವ ಸಂಭ್ರಮದಲ್ಲಿದೆ. ಇವತ್ತು ಸಂಜೆ ರಾಜ್ಯಪಾಲರು ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಸಂಬಂಧ ಅಲ್ಲಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಈ ನಡುವೆ ಮಣಿಪಾಲದಲ್ಲಿ ಚಿಣ್ಣರು ಸೇವ್ ಅರ್ಥ್ ಬ್ಯಾನ್ ಪ್ಲಾಸ್ಟಿಕ್ ಎಂಬ ಪ್ಲೆಕಾರ್ಡ್ ಹಿಡಿದು ಮಣಿಪಾಲ ಸಿಂಡಿಕೇಟ್ ಸರ್ಕಲ್ ನಿಂದ ಮಣಿಪಾಲ ಪೊಲೀಸ್ ಠಾಣೆ ತನಕ ರ್‍ಯಾಲಿ ನಡೆಸಿದರು.ಪರಿಸರ ಜಾಗೃತಿ ಕುರಿತು ಚಿಣ್ಣರು ನಡೆಸಿದ ಈ ರ್‍ಯಾಲಿ ನಗರದ ಜನರ ಗಮನ ಸೆಳೆಯಿತು.
ಮಣಿಪಾಲ ಪೊಲೀಸರು ಕೂಡ ಈ ಪುಟಾಣಿಗಳಿಗೆ ಪ್ರೋತ್ಸಾಹ ನೀಡಿ ಬೆನ್ನು ತಟ್ಟಿದರು. ಮಣಿಪಾಲ ಪೊಲೀಸ್ ಠಾಣೆಯ ಮಂಜುನಾಥ್ ಮತ್ತು ಸಿಬ್ಬಂದಿ ಪುಟಾಣಿಗಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಿಡ್ ಝೀ ಮಣಿಪಾಲದ ಮುಖ್ಯಸ್ಥೆ ಅರ್ಚನಾ ರಾವ್ ಈ ರ್‍ಯಾಲಿ ಆಯೋಜಿಸಿದ್ದರು.
Kshetra Samachara
25/08/2022 03:17 pm