ಕುಂದಾಪುರ: ನಿಮ್ಮ ಪ್ರತಿಭೆಯನ್ನು ಅಡಗಿಸಬೇಡಿ ಅದು ಯಾವಾಗಲೂ ಪ್ರಜ್ವಲಿಸಬೇಕು, ಬೆಳಕಿನ ದೀಪವನ್ನು ಒಂದು ಪಾತ್ರೆಯೊಳಗೆ ಹಾಕಿ ಇಟ್ಟರೆ ಅದರಿಂದೇನು ಪ್ರಯೋಜನವಿಲ್ಲ, ನಿಮ್ಮ ಪ್ರತಿಭೆಯಿಂದ ನೀವು ಸಮಾಜದಲ್ಲಿ ಬೆಳಗಬೇಕು ಎಂದು ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಸ್ಟ್ಯಾನಿ ತಾವ್ರೊ ಹೇಳಿದರು.
ಕುಂದಾಪುರದ ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ವಡೇರಹೋಬಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2022-23 ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂತೋಷ್ ಕುಮಾರ್ ಶೆಟ್ಟಿ ಬಿ.ಅರ್.ಪಿ. ಪ್ರಸ್ತಾವಿಕ ಮಾತನಾಡಿದರು.
ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ಇಲ್ಲಿನ ಸಮನ್ವಯ ಅಧಿಕಾರಿ ಅಶೋಕ್ ನಾಯ್ಕ್, ಸ್ಪರ್ಧಿಗಳಿಗೆ, ತೀರ್ಪುಗಾರರಿಗೆ ಸಲಹೆ ಸೂಚನೆ ನೀಡಿದರು. ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೇಸ್ ಶಾಂತಿ ಸ್ವಾಗತಿಸಿದರು. ಶಿಕ್ಷಕ ರತ್ನಾಕರ ಶೆಟ್ಟಿ ಅತಿಥಿಗಳಿಗೆ ಹೂ ಗುಚ್ಚ ನೀಡಿ ಸತ್ಕರಿಸಿದರು. ಸಂತ ಮೇರಿಸ್ ಪಿ.ಯು. ಕಾಲೇಜಿನ ಉಪನ್ಯಾಸಕರಾದ ನಾಗರಜ್ ಶೆಟ್ಟಿ ಮತ್ತು ಶಿಕ್ಷಕಿ ವಿದ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.
Kshetra Samachara
24/08/2022 05:00 pm