ಮುಲ್ಕಿ: ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಸೇವೆ, ಸಹಕಾರ, ಛಲದ ಮೂಲಕ ಯಶಸ್ಸನ್ನು ಗಳಿಸಬೇಕು ಎಂದು ದ.ಕ. ಜಿಲ್ಲಾಕಾರ್ಯನಿರತ ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಹೇಳಿದರು. ಸುರತ್ಕಲ್ ಗೋವಿಂದದಾಸ ಪದವಿ ಪೂರ್ವಕಾಲೇಜಿನಲ್ಲಿ ಜರಗಿದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಘಟಕದ 2022 23ನೇ ಸಾಲಿನ ಕಾರ್ಯ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ ಪಿ ಶುಭ ಹಾರೈಸಿದರು.ಪ್ರತಿಜ್ಞಾ ವಿಧಿಯನ್ನು ವಾಣಿಜ್ಯ ವಿಭಾಗದ ಉಪನ್ಯಾಸಕಿ ಕೃತಿ ಭೋಧಿಸಿದರು.
ಉಪಪ್ರಾಂಶುಪಾಲೆ ಸುನೀತಾ ಕೆ, ವಿದ್ಯಾರ್ಥಿಕ್ಷೇಮಪಾಲೆ .ಪಲ್ಲವಿ, ಘಟಕದ ನಾಯಕ ಭುವನ್, ಹಾಗೂ ನಾಯಕಿ ತೇಜಸ್ವಿನಿ,ರಾಕೇಶ್ ಹೊಸಬೆಟ್ಟು ಉಪಸ್ಥಿತರಿದ್ದರು. ಕಾರ್ಯಕ್ರಮ ಅಧಿಕಾರಿ ಪೈಕ ವೆಂಕಟರಮಣ ಸ್ವಾಗತಿಸಿ,ಪ್ರಸ್ತಾವನೆಗ್ಯೆದರು.
ವಿದ್ಯಾರ್ಥಿನಿ ಯಶಸ್ವಿನಿ ಶೆಟ್ಟಿ ವಂದಿಸಿದರು.
Kshetra Samachara
11/07/2022 08:10 pm