ಕುಂದಾಪುರ: ಪ್ರಥಮ ಪಿಯುಸಿ ಪರೀಕ್ಷೆ ನಿನ್ನೆ ಆರಂಭಗೊಂಡಿದ್ದು ಹಿಜಾಬ್ ಧರಿಸದೇ ಪರೀಕ್ಷೆ ಬರೆಯುವುದಿಲ್ಲ ಎಂದು ಪಟ್ಟುಹಿಡಿದಿರುವ ಉಡುಪಿ ಜಿಲ್ಲೆಯ 40 ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರುಹಾಜರಾಗಿದ್ದಾರೆ.
ಕುಂದಾಪುರದಲ್ಲಿ 24, ಬೈಂದೂರಿ ನಲ್ಲಿ 14 ಮತ್ತು ಉಡುಪಿಯ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿಲ್ಲ. ಉಡುಪಿಯ ವಿದ್ಯಾರ್ಥಿನಿಯರು ಹಿಂದೆ ನಡೆದ ಪ್ರಾಯೋಗಿಕ ಪರೀಕ್ಷೆಗೂ ಹಾಜರಾಗಿರಲಿಲ್ಲ.
ಕುಂದಾಪುರ ಸರಕಾರಿ ಪ.ಪೂ. ಕಾಲೇಜಿನ ಒಟ್ಟು 14 ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ 6 ಮಂದಿ ಹಾಜರಾಗಿ, 8 ಮಂದಿ ಗೈರಾಗಿದ್ದಾರೆ. ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ 28 ವಿದ್ಯಾರ್ಥಿನಿಯರಲ್ಲಿ13 ಮಂದಿ ಹಾಜರಾಗಿದ್ದಾರೆ. ಗೈರಾಗಿರುವ 15 ಮಂದಿಯಲ್ಲಿ 9 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದು ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಆಗ್ರಹಿಸಿದರು. ನಿರಾಕರಿಸಿದ ಪ್ರಾಂಶುಪಾಲರೊಂದಿಗೆ ವಾಗ್ವಾದಕ್ಕಿಳಿದ ಕೆಲವರು 'ಪ್ರವೇಶಾವಕಾಶ ನೀಡಿ, ಇಲ್ಲವೇ ಶಾಲಾ ಶುಲ್ಕ ವಾಪಸು ನೀಡಿ' ಎಂದು ಆಗ್ರಹಿಸಿದರು. ಭಂಡಾರ್ಕಾರ್ಸ್ ಕಾಲೇಜಿನ ಐವರಲ್ಲಿ ನಾಲ್ವರು ಹಾಜರಾಗಿ ಓರ್ವ ವಿದ್ಯಾರ್ಥಿನಿ ಗೈರಾಗಿದ್ದಾರೆ. ಬನ್ನೂರು ಶಾರದಾ ಕಾಲೇಜು ಹಾಗೂ ಗಂಗೊಳ್ಳಿಯ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನ ಎಲ್ಲ ವಿದ್ಯಾರ್ಥಿ ಗಳು ಹಾಜರಾಗಿದ್ದಾರೆ.
ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ 8 ವಿದ್ಯಾರ್ಥಿನಿಯರಲ್ಲಿ ಇಬ್ಬರು ಹಾಜರಾಗಿ 6 ಮಂದಿ ಗೈರಾಗಿ ದ್ದಾರೆ. ಬೈಂದೂರು ಸರಕಾರಿ ಪ.ಪೂ. ಕಾಲೇಜಿನ 10 ವಿದ್ಯಾರ್ಥಿನಿಯರಲ್ಲಿ ಇಬ್ಬರು ಹಾಜರಾಗಿ ಮಂದಿ 8 ಗೈರಾಗಿದ್ದಾರೆ.
Kshetra Samachara
30/03/2022 09:26 am