'ಪಬ್ಲಿಕ್ ನೆಕ್ಸ್ಟ್' ಇಂಪ್ಯಾಕ್ಟ್
ಬೆಳ್ಳಂಪಳ್ಳಿ: ಬೆಳ್ಳಂಪಳ್ಳಿಯ ಜೈಹಿಂದ್ ಅನುದಾನಿತ ಶಾಲೆಯಲ್ಲಿ 70ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಆದರೂ ಇಲ್ಲಿ ಒಬ್ಬರೇ ಒಬ್ಬರು ಖಾಯಂ ಶಿಕ್ಷಕರೇ ಇಲ್ಲ! ಸ್ವಾತಂತ್ರ್ಯ ಬಂದ ವರ್ಷವೇ ಆರಂಭಗೊಂಡ ಈ ಶಾಲೆಯ ಇಂದಿನ ಸ್ಥಿತಿ ಕುರಿತು 'ಪಬ್ಲಿಕ್ ನೆಕ್ಸ್ಟ್' ವರದಿ ಮಾಡಿದ್ದು ಒಂದು ದಿನದ ಹಿಂದೆಯಷ್ಟೇ. ಇದೀಗ ಶಾಲೆಗೊಬ್ಬರು ಟೀಚರ್ ಬಂದೇ ಬಿಟ್ಟಿದ್ದಾರೆ.
'ಜೈಹಿಂದ್' ಶಾಲೆಗೆ ಸರಕಾರಿ ಶಿಕ್ಷಕರನ್ನು ನೀಡಬೇಕು ಎಂದು ಹಳೆ ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಹೋರಾಟಗಾರರೂ ಧ್ವನಿ ಎತ್ತಿದ್ದರು. ಇದೀಗ ಇಲಾಖೆಯು ಒಬ್ಬರು ಶಿಕ್ಷಕರನ್ನು ನಿಯೋಜಿಸಿದ್ದು, ಖುಷಿಯ ವಿಚಾರ.
ಶಾಲೆಗೆ ಬಂದ ಶಿಕ್ಷಕರನ್ನು ವಿದ್ಯಾರ್ಥಿಗಳು ಮತ್ತು ಊರವರು ಹೂವು ನೀಡಿ ಸ್ವಾಗತಿಸಿದರು. ಈ ಸಂದರ್ಭ ಶಾಲೆಯಲ್ಲಿ ಸಂಭ್ರಮವೇ ಮನೆ ಮಾಡಿತ್ತು. ಇಲ್ಲಿ ಸಾಮಾಜಿಕ ಹೋರಾಟಗಾರ ಅನ್ಸಾರ್ ಅಹಮದ್, ಪ್ರಮೋದ್ ಉಚ್ಚಿಲ್ ಮತ್ತು ಶಾಲೆಯ ಹಳೆ ವಿದ್ಯಾರ್ಥಿಗಳ ಹೋರಾಟ ಉಲ್ಲೇಖಾರ್ಹ, ಶ್ಲಾಘನೀಯ. 'ಪಬ್ಲಿಕ್ ನೆಕ್ಸ್ಟ್' ತನ್ನ ಸಾಮಾಜಿಕ ಕಳಕಳಿಯನ್ನು ಹೀಗೆಯೇ ಮುಂದುವರೆಸಲಿದೆ.
PublicNext
29/12/2021 12:31 pm