ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಚಿಣ್ಣರಿಗೆ ಬ್ಯಾಂಡು, ವಾದ್ಯಗಳ ಸ್ವಾಗತ; ಬೆಲೂನು ನೀಡಿ ಸಂಭ್ರಮಾಚರಣೆ

ಕುಂದಾಪುರ: ಶಾಲೆಗಳಲ್ಲಿ ಇಂದು ಚಿಣ್ಣರನ್ನು ಬಗೆಬಗೆಯಲ್ಲಿ ಸ್ವಾಗತಿಸಲಾಯಿತು. ಕೆಲವೆಡೆ ಹೂವು, ಕೆಲವೆಡೆ ಸಿಹಿ ತಿಂಡಿ ನೀಡಿ ಪ್ರಾಥಮಿಕ ಶಾಲಾ ಮಕ್ಕಳನ್ನು ಸ್ವಾಗತಿಸಿದರೆ ಕುಂದಾಪುರದ ಪಡು‌ ಬೀಜಾಡಿಯಲ್ಲಿ ಮಕ್ಕಳನ್ನು ಬ್ಯಾಂಡು, ವಾದ್ಯದೊಂದಿಗೆ ಭರ್ಜರಿ‌ ಸ್ವಾಗತ ನೀಡಲಾಯಿತು.

ಒಂದೂ ಮುಕ್ಕಾಲು ವರ್ಷ ಮನೆಯಲ್ಲೇ ಕುಳಿತ ಮಕ್ಕಳು ಇದರಿಂದ ಪುಳಕಿತಗೊಂಡರು. ಶಾಲೆಯಲ್ಲಿ ಮಕ್ಕಳನ್ನು ಆಕರ್ಷಿಸಲು ಬೆಲೂನುಗಳನ್ನು ಕಟ್ಟಲಾಗಿತ್ತು. ಚಿಣ್ಣರು ತಮ್ಮ ಇಷ್ಟದ ಬಣ್ಣದ ಬೆಲೂನುಗಳನ್ನು ಪಡೆದುಕೊಂಡು ಖುಷಿ ಪಟ್ಟರು.

Edited By : Manjunath H D
Kshetra Samachara

Kshetra Samachara

25/10/2021 01:25 pm

Cinque Terre

6.48 K

Cinque Terre

0