ಕೋಟ: ಕೋವಿಡ್ ಪರಿಣಾಮದಿಂದಾಗಿ ಪಠ್ಯ ಚಟುವಟಿಕೆಗೆ ಸಾಕಷ್ಟು ಹಿನ್ನಡೆಯಾಗಿದೆ. ಹೀಗಾಗಿ ಪಿಯುಸಿ, ಪದವಿ ತರಗತಿಗಳಿಗೆ ದಸರಾ ರಜೆಯನ್ನು ನೀಡಬಾರದು ಎನ್ನುವುದು ಶಿಕ್ಷಣ ಇಲಾಖೆಯ ಬಯಕೆಯಾಗಿತ್ತು. ಆದರೆ ಇದೀಗ ಹಬ್ಬದಲ್ಲಿ ಭಾಗವಹಿಸಬೇಕು ಎನ್ನುವ ಬೇಡಿಕೆಗಳು ಹೆಚ್ಚು-ಹೆಚ್ಚು ಕೇಳಿಬರುತ್ತಿರುವುದರಿಂದ ರಜೆಯನ್ನು ಈ ವಿಭಾಗಕ್ಕೂ ವಿಸ್ತರಿಸುವ ಚಿಂತನೆ ಇದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು. ’
ಅವರು ಇಂದು ಕೋಟ ಮಣೂರು-ಪಡುಕರೆ ಸ.ಸಂಯುಕ್ತ ಪ್ರೌಢಶಾಲೆಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈಗಾಗಲೇ ಪದವಿ ತರಗತಿಯಲ್ಲಿ ಜಾರಿಗೆ ತರಲಾಗಿದೆ. ಇದನ್ನು ಪಿ.ಯು.ಸಿ. ಹಾಗೂ ಪ್ರೌಢಶಾಲೆ ಮುಂತಾದ ಕೆಳಹಂತಕ್ಕೆ ವಿಭಾಗಕ್ಕೆ ವಿಸ್ತರಿಸುವ ಉದ್ದೇಶವಿದೆ. ಈ ಬಗ್ಗೆ ಟಾಸ್ಕ್ ಪೋರ್ಸ್ಗಳನ್ನು ರಚಿಸಲಾಗಿದ್ದು ಸಾಧಕ-ಬಾಧಕಗಳನ್ನು ಅಧ್ಯಯನ ನಡೆಸಿ ಸರಕಾರಕ್ಕೆ ನೀಡಲಿದೆ. ಅನಂತರ ಕೆಳಹಂತಕ್ಕೂ ಇದನ್ನು ವಿಸ್ತರಿಸಲಾಗುತ್ತದೆ ಎಂದರು.
ಈಗಾಗಲೇ ನಿಶ್ಚಯಿಸಿದಂತೆ ದಸರಾ ಅನಂತರ ಒಂದನೇ ತರಗತಿಯಿಂದ ಎಲ್ಲಾ ಕ್ಲಾಸ್ಗಳನ್ನು ಆರಂಭಿಸುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಖ್ಯ ಮಂತ್ರಿಗಳು ಟಾಸ್ಕ್ ಫೋರ್ಸ್ ಸಭೆ ನಡೆಸಿ ತರಗತಿ ನಡೆಸಲು ಅನುಮತಿ ನೀಡುವ ಭರವಸೆ ಇದೆ ಎಂದರು.
Kshetra Samachara
08/10/2021 10:16 pm