ಮಂಗಳೂರು: ಮಂಗಳೂರು ಪೊಲೀಸ್ ಮೈದಾನದಲ್ಲಿಂದು ಪಿಎಸ್‌ಐ ಹಾಗೂ ಕಾನ್ಸ್‌ಟೇಬಲ್ ಹುದ್ದೆಗಾಗಿನ ಕಾರ್ಯಾಗಾರ ನಡೆಯಿತು. ಇದ್ರಲ್ಲಿ 400ಕ್ಕೂ ಅಧಿಕ ಮಂದಿ ಅಭ್ಯರ್ಥಿಗಳು ಭಾಗವಹಿಸಿದ್ರು.ದೈಹಿಕ ಪರೀಕ್ಷೆಯಲ್ಲಿ ಈಗಾಗಲೇ ಅರ್ಹತೆ ಪಡೆದಿರುವ 100 ಮಂದಿಗೆ ವಸತಿ, ಊಟದ ಸೌಲಭ್ಯದೊಂದಿಗೆ 30 ದಿನಗಳ ತರಬೇತಿ ಕಾರ್ಯಾಗಾರಕ್ಕೆ ಎರಡು ದಿನಗಳ ಹಿಂದೆ ಮಂಗಳೂರು ನಗರದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಕರೆ ನೀಡಿದ್ದರು. ಆದರೆ ನಿರೀಕ್ಷೆಗೂ ಮೀರಿ ಇಂದು ಅಭ್ಯರ್ಥಿಗಳು ಪೊಲೀಸ್ ತರಬೇತಿಯ ನೋಂದಣಿಗಾಗಿ ಆಗಮಿಸಿದ್ದರು. ವಿಶೇಷವೆಂದರೆ ಕಾನ್ಸ್‌ಟೇಬಲ್ ಹಾಗೂ ಪಿಎಸ್‌ಐ ಹುದ್ದೆಗಾಗಿ ಬಂದವರಲ್ಲಿ ಇಂಜಿನಿಯರಿಂಗ್, ಪದವಿ, ಸ್ನಾತಕೋತ್ತರ ಪದವಿಯನ್ನು ಪಡೆದವರ ಜೊತೆಗೆ ಈಗಾಗಲೇ ಕೆಲವೊಂದು ಉನ್ನತ ಹುದ್ದೆಗಳಲ್ಲಿ ಇರುವವರು ಇದ್ದರು.
Kshetra Samachara
09/08/2021 04:25 pm