ಮಂಗಳೂರು: ನೆರೆ ರಾಜ್ಯ ಕೇರಳದಲ್ಲಿ ಇದೀಗ ಓಣಂ ಹಬ್ಬದ ಸಡಗರ ಸಂಭ್ರಮ. ಆದರೆ ಶಿಕ್ಷಣಕ್ಕಾಗಿ ಕೇರಳದಿಂದ ಮಂಗಳೂರಿಗೆ ಬಂದು ನೆಲೆಸಿರುವ ವಿದ್ಯಾರ್ಥಿಗಳು ಮಾತ್ರ ಈ ಸಂಭ್ರಮದಿಂದ ವಂಚಿತರಾಗಿದ್ದಾರೆ. ಹಾಗೆಂದು ಅಂದುಕೊಂಡರೆ ಅದು ತಪ್ಪು. ಇಲ್ಲಿರುವ ಕೇರಳದ ವಿದ್ಯಾರ್ಥಿಗಳೂ ಅವರವರ ಕಾಲೇಜ್ ಕ್ಯಾಂಪಸ್‌ನಲ್ಲೇ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಎಲ್ಲಿ ನೋಡಿದರು ಬಣ್ಣಬಣ್ಣದ ಆಕರ್ಷಕ ಪೂಕಳಂ(ರಂಗೋಲಿ). ಕೇರಳದ ಮಾದರಿಯ ಉಡುಗೆ ತೊಡುಗೆಗಳನ್ನು ತೊಟ್ಟ ಯುವಕ ಯುವತಿಯರು.ಎಲ್ಲರ ಮುಖದಲ್ಲೂ ಹಬ್ಬದ ಸಂಭ್ರಮ. ತಮ್ಮ ಹುಟ್ಟೂರಿನಲ್ಲೇ ಇದ್ದ ಅನುಭವ.ಹೌದು ಶಿಕ್ಷಣಕ್ಕಾಗಿ ಕೇರಳದಿಂದ ಮಂಗಳೂರಿಗೆ ಬಂದಿರುವ ಈ ವಿದ್ಯಾರ್ಥಿಗಳಿಗೆ ತಮ್ಮ ರಾಜ್ಯದ ಸಂಭ್ರಮದ ಹಬ್ಬ ವಾಗಿರುವ ಓಣಂಗೆ ಕೇರಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಈ ಕೊರಗನ್ನು ನಿವಾರಿಸಲು ಇಲ್ಲಿನ ಕಾಲೇಜಿನ ಆಡಳಿತ ಮಂಡಳಿಗಳು ತಮ್ಮ ಕ್ಯಾಂಪಸ್‌ನಲ್ಲಿ ಓಣಂ ಹಬ್ಬವನ್ನು ಆಚರಿಸುತ್ತಾರೆ.
ಮಂಗಳೂರಿನ ಕರಾವಳಿ ಗ್ರೂಪ್ ಆಫ್ ಕಾಲೇಜು ಹಾಗೂ ಜಿ.ಆರ್ ಮೆಡಿಕಲ್ ಕಾಲೇಜು ಕೇರಳದ ವಿದ್ಯಾರ್ಥಿಗಳಿಗೋಸ್ಕರ ಈ ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿತು.ಓಣಂ ಎಂದರೆ ಅಲ್ಲಿ ಪೂಕಳಂ(ಹೂವಿನ ರಂಗೋಲಿ)ಇರಲೇ ಬೇಕು. ಪ್ರತಿಯೊಬ್ಬ ಕೇರಳಿಗ ಯುವತಿಯರು,ಮಹಿಳೆಯರು ಈ ಪೂಕಳಂ ಅನ್ನು ಹಾಕುತ್ತಾರೆ. ಅಂತೆಯೇ ಇಲ್ಲಿಯೂ ವಿದ್ಯಾರ್ಥಿನಿಯರು ಈ ಪೂಕಳಂನ್ನು ಅಲ್ಲಲ್ಲಿ ಹಾಕಿದ್ದು ಎಲ್ಲರನ್ನು ಆಕರ್ಷಿಸುತ್ತಿತ್ತು. ಇದರೊಂದಿಗೆ ಕರಾಚಳಿಯ ಹುಲಿವೇಷದದೊಂದಿಗೆ ಓಣಂ ಮೆರವಣಿಗೆ ನಡೆಸಿ ಕೇರಳದಲ್ಲಿ ಆಗುವ ಎಲ್ಲಾ ರೀತಿಯ ಮನೋರಂಜನೆಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ತಾವು ಕರ್ನಾಟಕದಲ್ಲಿದ್ದೇವೆ ಅನ್ನುವ ಭಾವನೆ ಇರದೆ ಕೇರಳದಲ್ಲೇ ಇದ್ದೇವೆ ಅನ್ನುವಂತಿದ್ದರು ಇಲ್ಲಿನ ವಿದ್ಯಾರ್ಥಿಗಳುಇಲ್ಲಿ ಎಲ್ಲರೊಂದಿಗೆ ಬೆರೆತು ಈ ಹಬ್ಬವನ್ನು ಜಾತಿ, ಮತ, ಧರ್ಮದ ಭೇದವಿಲ್ಲದೆ ಆಚರಿಸಿದ್ದು, ಎಲ್ಲಾ ರಾಜ್ಯದ ವಿದ್ಯಾರ್ಥಿಗಳು ಸಂಭ್ರಮಿಸಿದರು.ಕೇರಳದಲ್ಲಿ ಈ ಓಣಂ ಹಬ್ಬದ ನಂತರ ಕೇರಳಿಗರಿಗೆ ಹೊಸ ವರ್ಷ. ಹೀಗಾಗಿ ಮುಂದಿನ ವರ್ಷವನ್ನು ಅದ್ದೂರಿಯಾಗಿ ಈ ಓಣಂ ಹಬ್ಬದ ಮೂಲಕ ಸ್ವಾಗತಿಸಲಾಗುತ್ತದೆ. ಕೇರಳದ ಸಂಭ್ರವನ್ನು ಕರ್ನಾಟಕದಲ್ಲೂ ಈ ಕಾಲೇಜು ಮಾಡಿದ್ದು ಎಲ್ಲಾ ವಿದ್ಯಾರ್ಥಿಗಳ ಪ್ರಶಂಸೆಗೆ ಪಾತ್ರವಾಯಿತು.ಇಂತಹ ಆಚರಣೆ ಎಲ್ಲಾ ಕಾಲೇಜುಗಳಲ್ಲಿ ನಡೆಯಲಿ ಅನ್ನುವ ಆಶಯವೂ ವ್ಯಕ್ತವಾಯಿತು.
Kshetra Samachara
04/09/2022 03:50 pm