ಉಡುಪಿ: ಎಂಜಿಎಂ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ಸ್ನಾತಕೋತ್ತರ ವಿದ್ಯಾರ್ಥಿನಿಯರನ್ನೂ ಹೊರಗೆ ಕಳಿಸಿದ ಪ್ರಸಂಗ ಇವತ್ತು ನಡೆದಿದೆ.
ಬೆಳಿಗ್ಗೆ ಕಾಲೇಜಿಗೆ ಬಂದಿದ್ದ ಪಿಜಿ ವಿದ್ಯಾರ್ಥಿನಿಯರು ಕಾಲೇಜಿನೊಳಗೆ ಹೋಗಿದ್ದರು.ಈ ವೇಳೆ ಶಿಕ್ಷಕರು ,ನೀವು ತರಗತಿಗೆ ಬಾರದಿದ್ದರೆ ಇಲ್ಲಿ ನಿಲ್ಲಬೇಡಿ ಹೊರ ಹೋಗಿ ಎಂದಿದ್ದಾರೆ.
ಈ ವೇಳೆ ಹೊರ ಬಂದ ಪಿಜಿ ,ಪದವಿ ಮತ್ತು ಪಿಯು ವಿದ್ಯಾರ್ಥಿನಿಯರು ತಮ್ಮ ಅಸಮಾಧಾನ ತೋಡಿಕೊಂಡ ಘಟನೆ ನಡೆಯಿತು.ಗೊಂದಲ ನಿರ್ಮಾಣವಾಗುತ್ತಲೇ ಕಾಲೇಜು ಆವರಣಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಯಿತು.
Kshetra Samachara
24/02/2022 06:11 pm