ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಹಿಜಾಬ್ ತೆಗೆಯದ ವಿದ್ಯಾರ್ಥಿಗಳು ಎಕ್ಸಾಂ ಬರೆಯದೆ ಮನೆಗೆ ವಾಪಾಸ್

ಮೂಡುಬಿದಿರೆ: ತಾಲೂಕಿನ ಮಹಾವೀರ ಕಾಲೇಜಿನ ಪದವಿ ವಿಭಾಗದ 14 ವಿದ್ಯಾರ್ಥಿಗಳು ಹಿಜಾಬ್ ಇಲ್ಲದೆ ಎಕ್ಸಾಂ ಬರೆಯಲು ಒಪ್ಪದೆ ಮನೆಗೆ ತೆರಳಿದ ಘಟನೆ ಗುರುವಾರ ನಡೆದಿದೆ.

ಪದವಿ ಕಾಲೇಜಿನ ವಿದ್ಯಾರ್ಥಿ ಗಳಿಗೆ ಇಂದು ಪರೀಕ್ಷೆ ಆರಂಭಗೊಂಡಿದ್ದು ಅದರಂತೆ ಮಹಾವೀರ ಕಾಲೇಜಿನ 14 ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದಿದ್ದು,4 ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಅವರನ್ನು ಪೊಲೀಸರು ಕಾಲೇಜಿನ ಗೇಟಿನಲ್ಲಿಯೇ ತಡೆದು ತಾವು ಹಿಜಾಬ್ ತೆಗೆದಿಟ್ಟು ಪರೀಕ್ಷೆಗೆ ಹಾಜರಾಗುವಂತೆ ಮನವೊಲಿಸುವ ಪ್ರಯತ್ನ ನಡೆಸಿದರು.

ಪೊಲೀಸರು ಮತ್ತು ಪ್ರಾಂಶುಪಾಲರು ವಿದ್ಯಾರ್ಥಿಗಳ ಹೆತ್ತವರನ್ನು ಮನವೊಲಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ ಕೋರ್ಟಲ್ಲಿ ಹಿಜಾಬ್ ಪ್ರಕರಣ ತನಿಖೆ ನಡೆಯುತ್ತಿರುವುದರಿಂದ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲು ಸಾಧ್ಯವಿಲ್ಲವೆಂದು ಹೇಳಿದರೂ ವಿದ್ಯಾರ್ಥಿಗಳು ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ಒಪ್ಪದ ಕಾರಣ ಬೆಳಿಗ್ಗೆಯಿಂದ 10.45 ರ ವರೆಗೆ ಕಾಲೇಜಿನ ಗೇಟಿನ ಒಳಗಡೆಯೆ ವಿದ್ಯಾರ್ಥಿಗಳು ಕಾದು ನಿಂತಿದ್ದು ನಂತರ ಮನೆ ಕಡೆಗೆ ತೆರಳಿದರು.

Edited By :
Kshetra Samachara

Kshetra Samachara

17/02/2022 04:49 pm

Cinque Terre

7.46 K

Cinque Terre

2

ಸಂಬಂಧಿತ ಸುದ್ದಿ