ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೋಟರಿ ಕ್ಲಬ್ ಬೆಳ್ತಂಗಡಿ :ಎಸ್.ಎಸ್.ಎಲ್.ಸಿ ಸಾಧಕರಿಗೆ ಸನ್ಮಾನ

ಬೆಳ್ತಂಗಡಿ:ರೋಟರಿ ಕ್ಲಬ್ ಬೆಳ್ತಂಗಡಿಯು ತನ್ನ ವಾರದ ಸಭೆಯಲ್ಲಿ ತಾಲೂಕಿನ ಎಸ್.ಎಸ್.ಎಲ್ ಸಿ ಸಾಧಕರನ್ನು ಸನ್ಮಾನಿಸಿತು.ತನ್ನ ವಾರದ ಸಭೆಯಲ್ಲಿ ರಾಜ್ಯದಲ್ಲೆ ಪ್ರಥಮ ಸ್ಥಾನ ಗಳಿಸಿದ ಸೈಂಟ್ ಮೇರೀಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಕು.ಸಂಯುಕ್ತಾ ಪ್ರಭು (625/625) ,ಗಿಲ್ಡಾ ಮಾಥ್ಯು ( 623/625) ,ಹಾಗೂ ಜೀವನ್ ಆಶಿತ್ ಪಿರೇರಾ ( 623/625 ) ಹಾಗೂ ರೋಟರಿ ಕುಟುಂಬದ ಸದಸ್ಯೆ , ಎಸ್ ಡಿ.ಎಂ. ಹೈಸ್ಕೂಲ್ ಉಜಿರೆ ( ಸಿ.ಬಿ.ಯ.ಎಸ್) ವಿಧ್ಯಾರ್ಥಿನಿ ಅನಘಾ ಇವರುಗಳನ್ನು ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ರೊ.ಶರತ್ ಕೃಷ್ಣ ಪಡುವೆಟ್ನಾಯ, ಕಾರ್ಯದರ್ಶಿ ರೊ. ಆಬೂಬಕ್ಕರ್, ನಿಕಟ ಪೂರ್ವ ಅಧ್ಯಕ್ಷ ರಾದ ರೊ.ಧನಂಜಯ ರಾವ್, ಕಾರ್ಯದರ್ಶಿ ರೊ.ಶ್ರೀಧರ್ ಕೆ.ವಿ ,ನಿಯೋಜಿತ ಅಧ್ಯಕ್ಷರಾದ ರೊ.ಮನೋರಮ, ನಿಯೋಜಿತ ಕಾರ್ಯದರ್ಶಿ ರೊ.ರಕ್ಷಾ ರಾಘ್ನೀಶ್ ಹಾಗೂ ಕ್ಲಬ್ ನ ಪೂರ್ವಾಧ್ಯಕ್ಷರುಗಳು, ಸದಸ್ಯರುಗಳು ಹಾಗೂ ಸನ್ಮಾನಿತರ ಪೋಷಕರುಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

20/08/2021 06:18 pm

Cinque Terre

4.66 K

Cinque Terre

0