ಉಡುಪಿ: ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಉಡುಪಿ ಮೂಲದ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾರೆ.
ಉಡುಪಿಯ ಮಣಿಪಾಲದ ವತ್ಸಲಾ ಮತ್ತು ದಿನೇಶ್ ಸಾಮಂತ್ ಅವರ ಮಗಳು ರಶ್ಮಿ ಅಧ್ಯಕ್ಷ ಸ್ಥಾನಕ್ಕೇರುವ ಮೂಲಕ ಕರ್ನಾಟಕದ ಹೆಸರು ಬೆಳಗಿದ್ದಾರೆ. ಸದ್ಯ ರಶ್ಮಿ ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿವಿಯ ಲಿನಾಕ್ರೆ ಕಾಲೇಜಿನಲ್ಲಿ ಎನರ್ಜಿ ಸಿಸ್ಟಮ್ಸ್ ವಿಷಯದಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ.
ವಿದ್ಯಾರ್ಥಿ ಚುನಾವಣೆಯಲ್ಲಿ ನಾಲ್ಕು ಮಂದಿ ಸ್ಪರ್ಧಿಸಿದ್ದು ಒಟ್ಟು 3,708 ಮತಗಳು ಚಲಾವಣೆಯಾಗಿದೆ. ಅದರಲ್ಲಿ ಕನ್ನಡತಿ ರಶ್ಮಿ ಸಾಮಂತ ಬರೋಬ್ಬರಿ 1,966 ಮತಗಳನ್ನು ಗಳಿಸುವ ಮೂಲಕ ಆಕ್ಸ್‌ಫರ್ಡ್ ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಇದರಿಂದ ಆಕ್ಸ್‌ಫರ್ಡ್ ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೇರಿದ ಮೊದಲ ಭಾರತೀಯ ವಿದ್ಯಾರ್ಥಿನಿ ಎನ್ನುವ ಖ್ಯಾತಿಯನ್ನು ರಶ್ಮಿ ಪಡೆದಿದ್ದಾರೆ.
Kshetra Samachara
14/02/2021 06:22 pm