ಕಾಪು: ಕಾಪುವಿನ ಸರಕಾರಿ ಪಾಲಿಟಕ್ನಿಕ್ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ 2021- 22 ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮ ಕೋರ್ಸ್‍ಗಳ ಪ್ರವೇಶ ಆರಂಭಗೊಂಡಿದೆ. ಕಾಪುವಿನ ಬೆಳಪು ಗ್ರಾಮದ ದೇವಿನಗರದಲ್ಲಿರುವ ಈ ನೂತನ ತಾಂತ್ರಿಕ ಶಿಕ್ಷಣ ಸಂಸ್ಥೆ ಎಐಸಿಟಿಇ ನವದೆಹಲಿಯಿಂದ ಮಾನ್ಯತೆ ಪಡೆದಿದೆ. ಇಲ್ಲಿ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ 3 ವರ್ಷಗಳ ಅವಧಿಯ ಕೋರ್ಸ್‍ಗಳಾದ ಆಟೋಮೇಷನ್ ಆಂಡ್ ರೊಬೋಟಿಕ್ಸ್ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಆಂಡ್ ಬಿಗ್ ಡೇಟಾ ಕೋರ್ಸ್‍ಗಳು ಲಭ್ಯವಿದೆ.
ಆ.8 ರಿಂದ ಪ್ರವೇಶ ಆರಂಭಗೊಂಡಿದ್ದು ಪ್ರವೇಶ ಪಡೆಯಲು ಸೂಕ್ತ ದಾಖಲೆಗಳೊಂದಿಗೆ ವಿದ್ಯಾರ್ಥಿಗಳು ನೇರವಾಗಿ ಶಿಕ್ಷಣ ಸಂಸ್ಥೆಯನ್ನು ಭೇಟಿ ನೀಡಬೇಕಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9480773870, 9740116084 ನ್ನು ಸಂಪರ್ಕಿಸುವಂತೆ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಮಾಹಿತಿ ನೀಡಿದೆ.
Kshetra Samachara
08/09/2021 02:14 pm