ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೋವಿಡ್ ಕಾರಣಕ್ಕೆ ಪರೀಕ್ಷೆ ತಪ್ಪಿಸಿಕೊಂಡವರಿಗೆ ಮತ್ತೊಮ್ಮೆ ಅವಕಾಶ

ಮಂಗಳೂರು: ಕೋವಿಡ್ ಕಾರಣದಿಂದ ಪರೀಕ್ಷೆ ಬರೆಯಲು ಸಾಧ್ಯವಾಗದು ವಿದ್ಯಾರ್ಥಿಗಳಿಗೆ ಮಂಗಳೂರು ವಿವಿ ಇನ್ನೊಂದು ಅವಕಾಶವನ್ನ ಒದಗಿಸಿದೆ. ಡಿಸೆಂಬರ್ 21 ರಂದು ಮಡಿಕೇರಿ, ಮಂಗಳೂರು ವಿವಿ ಕಾಲೇಜು ಹಾಗೂ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಅವಕಾಶವನ್ನ ಮಾಡಿಕೊಡುವುದಾಗಿ ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್ ಧರ್ಮ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಪದವಿ ಪರೀಕ್ಷೆ ಫಲಿತಾಂಶವೂ ಪ್ರಕಟಗೊಂಡಿದ್ದು, ಕೋವಿಡ್ ಕಾರಣದಿಂದ ಪರೀಕ್ಷೆಗೆ ಆಗಮಿಸಲು ಸಾಧ್ಯವಾಗದ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಭೂತಾನ್, ಲಕ್ಷದ್ವೀಪ, ಜಮ್ಮು&ಕಾಶ್ಮೀರ, ಫಿಜಿ ಮುಂತಾದ ಹಲವು ವಿವಿಗಳ ಸಹಾಯದಿಂದ ಪರೀಕ್ಷೆಯನ್ನ ಆಯೋಜಿಸಲಾಗಿತ್ತು. ಇನ್ನು ಈಗಾಗಲೇ ಪ್ರಕಟಗೊಂಡಿರುವ ಫಲಿತಾಂಶದಲ್ಲಿ ಸಾಫ್ಟ್ ವೇರ್ ಸಮಸ್ಯೆ ಆಗಿರೋದು ನಿಜ.‌ ಕೆಲವು ವಿದ್ಯಾರ್ಥಿಗಳ ಫಲಿತಾಂಶ ಆರಂಭದಲ್ಲಿ ಉತ್ತೀರ್ಣ ತೋರಿಸಿ, ಬಳಿಕ ಅನುತ್ತೀರ್ಣ ಎಂದು ತೋರಿಸಿತ್ತು. ಇದರಿಂದ ATTRIS ಸಾಫ್ಟ್ ವೇರ್ ನಿರ್ವಹಣೆಗೆ ಕಂಪೆನಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದರು. ಅಲ್ಲದೇ ಫಲಿತಾಂಶದ ಬಗ್ಗೆ ಯಾವುದೇ ಗೊಂದಲ, ಅತೃಪ್ತ ಇದ್ದರೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು.

Edited By : Manjunath H D
Kshetra Samachara

Kshetra Samachara

24/11/2020 01:48 pm

Cinque Terre

14.34 K

Cinque Terre

0