ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಟ್ಟೆ: "ಸಾವಯವ ಕೃಷಿ ಮೂಲಕ ಅಧಿಕ ಇಳುವರಿ ಪಡೆದು ಕೃಷಿ ಭೂಮಿಯನ್ನು ಸಂರಕ್ಷಿಸಿ

ಮುಲ್ಕಿ: ಕಿನ್ನಿಗೋಳಿ ಸಮೀಪದ ಐಕಳ ಪಟ್ಟೆ ಬೈಲಂಗಡಿ ಹರೀಶ್ ಅಂಚನ್ ರವರ ಮನೆಯಲ್ಲಿ ನಡೆದ ಅಡಿಕೆ, ಮಲ್ಲಿಗೆ ಮತ್ತು ಕಬ್ಬು ಬೆಳೆಯ ಬಗ್ಗೆ ತರಬೇತಿ ಮತ್ತು ಸಾವಯವ ಗೊಬ್ಬರದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.ಸಭೆಯಲ್ಲಿ ಗಿರೀಶ್ ಭಟ್ ಮಾತನಾಡಿ ಹಾನಿಕಾರಕ ರಾಸಾಯನಿಕವನ್ನು ಬಳಸದೆ ಸಾವಯವ ಕೃಷಿ ಪದ್ದತಿಯಿಂದ ಅಧಿಕ ಇಳುವರಿ ಪಡೆದು ಉತ್ತಮ ಕೃಷಿಕರಾಗಿ ಕೃಷಿ ಭೂಮಿಯನ್ನು ಸಂರಕ್ಷಿಸಿ ಎಂದರು.

ಸಭೆಯಲ್ಲಿ ಕೃಷಿಯಿಂದ ಬೆಳೆ ಬೆಳೆಯಬೇಕು ನಿರಂತರ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮಹಾವಿಷ್ಣು ಪ್ರಗತಿ ಬಂಧು ತಂಡದ ಸದಸ್ಯರಾದ ನಾಗೇಶ್ ಪೂಜಾರಿ, ಕೇಶವ ಪೂಜಾರಿ, ಹರೀಶ್ ಅಂಚನ್, ಉಮೇಶ್ ಕುಲಾಲ್, ಬಾಲಕೃಷ್ಣ ಶೆಟ್ಟಿ, ಸುಧಾಕರ ಕುಲಾಲ್ ,‌ಪಾಂಡು ಪೂಜಾರಿ ರವರನ್ನು ಗೌರವಿಸಲಾಯಿತು.

ಈ ಸಂದರ್ಭ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವಾ ಪ್ರತಿನಿಧಿ ಲೀಲಾ ಪ್ರಸನ್ನ, ಮೇಲ್ವಿಚಾರಕರಾದ ನವೀನ್, ಐಕಳ ಒಕ್ಕೂಟ ಅಧ್ಯಕ್ಷೆ ವಸಂತ್ ಪೂಜಾರಿ, ಏಳಿಂಜೆ ಒಕ್ಕೂಟದ ಅಧ್ಯಕ್ಷೆ ಪದ್ಮಿನಿ ವಸಂತ್, ಐಕಳ ಒಕ್ಕೂಟದ ಸೇವಾ ಪ್ರತಿನಿಧಿ ಸುಮನಾ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

07/10/2022 06:50 pm

Cinque Terre

3.09 K

Cinque Terre

0

ಸಂಬಂಧಿತ ಸುದ್ದಿ