ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ : ಅಳಿವಿನಂಚಿನಲ್ಲಿ ಹುಲಿವೇಷದ ನೃತ್ಯ, ಉಳಿವಿಗಾಗಿ ಹೊಸ ವೇದಿಕೆ

ಕುಂದಾಪುರ : ಇತ್ತೀಚಿನ ದಿನಗಳಲ್ಲಿ ಹುಲಿವೇಷ ಹಾಕಿ ಕುಣಿಯುವುದು ಹೆಚ್ಚುತ್ತಿದೆ. ಆದರೆ ಹುಲಿವೇಷದ ತವರೂರಿನ ಹುಲಿಗಳು ಮಾತ್ರ ತಮ್ಮ ಸಂಪ್ರದಾಯವನ್ನು ಬಿಡದೇ ಅಸಲೀ ಮುಖಗಳನ್ನು ಹಾಗೇ ಉಳಿಸಿಕೊಂಡಿವೆ ಎನ್ನುವುದಕ್ಕೆ ಕುಂದಾಪುರದ ಕಲಾಕ್ಷೇತ್ರ ಆಯೋಜಿಸಿದ ಹುಲಿವೇಷ ನೃತ್ಯ ಸಾಕ್ಷಿಯಾಯಿತು.

ಸಾಂಪ್ರದಾಯಿಕ ಹುಲಿವೇಷಗಳ ನೃತ್ಯ ಅಳಿದುಹೋಗುತ್ತಿದೆ ಎನ್ನುವುದನ್ನು ಮನಗಂಡ ಕಲಾಕ್ಷೇತ್ರ ಕುಂದಾಪುರದ ರೂವಾರಿಗಳು ಕುಂದಾಪುರದ ಪಾರಿಜಾತ ವೃತ್ತದಲ್ಲಿ ಹುಲಿವೇಷ ನೃತ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಕುಂದಾಪುರದ ಸಾವಿರಾರು ಅಭಿಮಾನಿಗಳು ಹುಲಿವೇಷ ವೀಕ್ಷಿಸಿ ತನು ಮನ ಧನ ಸಹಾಯವನ್ನಿತ್ತು ಪ್ರೋತ್ಸಾಹಿಸಿದ್ದಾರೆಂದರೇ ಇತ್ತೀಚಿನ ದಿನಗಳಲ್ಲಿ ಹುಲಿ ವೇಷಗಳ ಪ್ಯಾಷನ್'ಗಳನ್ನು ಅರ್ಥ ಮಾಡಿಕೊಳ್ಳಬಹುದು.

ಕುಂದಾಪುರದ ಹುಲಿಗಳೇ ಬೇರೆ, ಅವರ ಸ್ಟೈಲೇ ಬೇರೆ ಎನ್ನುವುದನ್ನು ಸಾಬೀತುಪಡಿಸಿದ ಹುಲಿವೇಷಧಾರಿಗಳಿಗೆ ಸಾಂಪ್ರದಾಯಿಕ ಸಂಗೀತ ಸಾಧನಗಳಾದ ವಾದ್ಯ(ಶಹನಾಯಿ), ಡೋಲು ಹಾಗೂ ಚೆಂಡೆಗಳು ಸಾಥ್ ನೀಡಿದವು. ಹುಲಿ ವೇಷಗಳೂ ಸಾಂಪ್ರದಾಯಿಕವಾಗಿ ಮೈಮೇಲೆ ಫಲಪುಷ್ಪಗಳ ವಿಭಿನ್ನ ಶೃಂಗಾರಗಳೊಂದಿಗೆ ಮೇಳೈಸಿದವು.

ಒಟ್ಟಾರೆಯಾಗಿ ಕಲಾಕ್ಷೇತ್ರ ಕುಂದಾಪುರ ಹಮ್ಮಿಕೊಂಡ ಹುಲಿವೇಷ ನೃತ್ಯ ಕಾರ್ಯಕ್ರಮ ಕುಂದಾಪುರದಲ್ಲಿ ಇತಿಹಾಸ ಸೃಷ್ಟಿಸಿದ್ದಲ್ಲದೇ ಹುಲಿವೇಷದ ಸಾಂಪ್ರದಾಯಿಕ ಕಲೆಯನ್ನು ಮುಂದಿನ ಪೀಳಿಗೆಗೆ ಬಿತ್ತಿದ್ದಂತೂ ಸುಳ್ಳಲ್ಲ.

ಜಯಶೇಖರ್ ಮಡಪ್ಪಾಡಿ, ಪಬ್ಲಿಕ್ ನೆಕ್ಸ್ಟ್ ಕುಂದಾಪುರ

Edited By : Manjunath H D
PublicNext

PublicNext

07/10/2022 06:15 pm

Cinque Terre

28.97 K

Cinque Terre

0

ಸಂಬಂಧಿತ ಸುದ್ದಿ