ಕಟೀಲು: ಪುನರೂರು ಪ್ರತಿಷ್ಠಾನ ಆಶ್ರಯದಲ್ಲಿ ಜನ ವಿಕಾಸ ಸಮಿತಿ ಸಹಕಾರದಲ್ಲಿ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಸಲುವಾಗಿ ಪ್ರತಿಭಾ ಸೌರಭ-2024 ಕಾರ್ಯಕ್ರಮವ ಶನಿವಾರ ಕಟೀಲಿನ ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾ ಭವನದಲ್ಲಿ ನಡೆಯಿತು.
ಶ್ರಿ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ವೇದಮೂರ್ತಿ ಲಕ್ಷ್ಮೀ ನಾರಾಯಣ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ ಪುನರೂರು ಪ್ರತಿಷ್ಠಾನದ ವತಿಯಿಂದ ಮಕ್ಕಳಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿ ಮೂಡಿಸುವುದರ ಜೊತೆಗೆ ಮಕ್ಕಳ ಸೂಕ್ತ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಕಾರ್ಯ ಅಭಿನಂದನೀಯ ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುನರೂರು ಪ್ರತಿಷ್ಥಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿದ್ದರು.
ಕಿನ್ನಿಗೋಳಿಯ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ಶುಭಸಂಶನೆಗೈದರು
ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ನ ಅಧ್ಯಕ್ಷ ಬಿ ಶಿವಪ್ರಸಾದ್ ,ಉದ್ಯಮಿ ಅವಿನಾಶ್ ರಾವ್ ಕಿನ್ನಿಗೋಳಿ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವ ಪ್ರಸಾದ್ ಪುನರೂರು,ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ಜನ ವಿಕಾಸ ಸಮಿತಿ ಅಧ್ಯಕ್ಷ ಶಶಿಕರ ಕೆರೆಕಾಡು,ಸಮಿತಿಯ ಸದಸ್ಯರಾದ ದಾಮೋದರ್ ಶೆಟ್ಟಿ ಕೊಡೆತ್ತೂರು, ಪ್ರಾಣೇಶ್ ಭಟ್ ದೇಂದಡ್ಕ,
ಅಕ್ಷತಾ ಶೆಟ್ಟಿ,ಆನಂದ್ ಮೇಲಾಂಟ ಉಪಸ್ಥಿತರಿದ್ದರು.
ದೇವಪ್ರಸಾದ್ ಪುನರೂರು ಸ್ವಾಗತಿಸಿದರು ಜಿತೇಂದ್ರ ವಿ ರಾವ್ ನಿರೂಪಿಸಿದರು ಪ್ರಾಣೇಶ್ ಧನ್ಯವಾದ ಅರ್ಪಿಸಿದರು ಬಳಿಕ ಪ್ರತಿಭಾ ಸೌರಭ 2024 ನಡೆಯಿತು.
Kshetra Samachara
14/12/2024 02:46 pm