ಬಜಪೆ: ಶ್ರೀ ಕೋಟೆ ಬಬ್ಬುಸ್ವಾಮಿ ಕೊರ್ದಬ್ಬು ದೈವಸ್ಥಾನ ಸಿದ್ಧಾರ್ಥ ನಗರ ಬಜಪೆಯಲ್ಲಿ 2023ರ ಪೆಬ್ರವರಿಯಲ್ಲಿ ನೂತನವಾಗಿ ಪ್ರತಿಷ್ಟಾಪಿಸಲಾಗುವ ಕೊಡಿಮರದ ತಯಾರಿಯ ಪೂರ್ವಭಾವಿಯಾಗಿ ತೈಲಮಜ್ಜನ ಪ್ರಕ್ರಿಯೆ ಸಾಂಪ್ರದಾಯಿಕವಾಗಿ ಜರಗಿತು.
ಈ ಸಂದರ್ಭ ಆಡಳಿತ ಸಮಿತಿಯ ಪ್ರಮುಖಲಲ್ಲೋರ್ವರಾದ ಎಮ್. ದೇವದಾಸ್ ಅವರು ಮಾತನಾಡಿದರು. ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಜಯಾನಂದ ಕೋಟ್ಯಾನ್ , ಉಪಾಧ್ಯಕ್ಷ ಬಾಬು ಬೆಲ್ಚಡ , ಅರ್ಚಕ ಪ್ರಕಾಶ್ ಉದ್ಯಮಿಗಳಾದ ಕೃಷ್ಣ ಕಲ್ಲೋಡಿ , ಗಿರೀಶ್ ಎಮ್ ಶೆಟ್ಟಿ ಕಟೀಲು , ಕೃಷ್ಣಾನಂದ ಡಿ , ಸತೀಶ್ ಸಾಲ್ಯಾನ್ ಮತ್ತಿತರರು ಈ ವೇಳೆ ಹಾಜರಿದ್ದರು.
Kshetra Samachara
05/10/2022 06:48 pm