ಬೈಂದೂರು: ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಉಪ್ಪುಂದ ನಾಗರಿಕರ ವೇದಿಕೆಯಿಂದ ಕರ್ನಾಟಕ ರಾಜ್ಯದಿಂದ ಪ್ರಪ್ರಥಮವಾಗಿ ಕೇಂದ್ರ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರದ ನ್ಯಾಯಾಂಗ ಸದಸ್ಯರಾಗಿ ಆಯ್ಕೆಯಾದ ಯು.ಎಸ್ ಯೋಗೇಶ್ ಕುಮಾರ್ ಅವರಿಗೆ ಸನ್ಮಾನ ಮಾಡಲಾಯಿತು.
ನಿವೃತ್ತ ನ್ಯಾಯಾಧೀಶರು ಕರ್ನಾಟಕ ಉಚ್ಚ ನ್ಯಾಯಾಲಯ ಅಧ್ಯಕ್ಷರು, ಪ್ರವೇಶ ಮೇಲ್ವಿಚಾರಣೆ ಸಮಿತಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರು ಜಸ್ಟಿಸ್ ಬಿ.ಮನೋಹರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಬಹಳ ಪ್ರಾಮುಖ್ಯವಾದುದು. ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುವರು ನಮ್ಮ ಕರ್ನಾಟಕದಿಂದ ಪ್ರಪ್ರಥಮ ಬಾರಿಗೆ ಇಷ್ಟು ದೊಡ್ಡದ ಹುದ್ದೆಗೆ ಆಯ್ಕೆಯಾಗಿರುವುದು ನಮ್ಮ ಇಡೀ ಕರ್ನಾಟಕಕ್ಕೆ ಹೆಮ್ಮೆಯಾಗುತ್ತದೆ ಎಂದು ಹೇಳಿದರು.
ರವಿ ಎಂ ನಾಯ್ಕ್ ನಿವೃತ್ತ ಜಿಲ್ಲಾ ನ್ಯಾಯಾಧೀಶರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸನ್ಮಾನಗೊಂಡ ಯು.ಎಸ್ ಯೋಗೀಶ್ ಕುಮಾರ್ ಮಾತನಾಡಿ, ನಾನು ಓದಿರುವುದು ಕನ್ನಡ ಸರಕಾರಿ ಶಾಲೆಯಲ್ಲಿ. ನನ್ನ ಶಿಕ್ಷಣ ಅಭ್ಯಾಸ ಡಿಗ್ರಿ ತನಕ ಸರಕಾರಿ ಶಾಲೆಯಲ್ಲಿ ಕಲಿತಿದ್ದು. ನನ್ನ ತಂದೆ ಸರಕಾರಿ ಶಾಲೆಯ ಮೇಷ್ಟ್ರು. ಅವರ ಮಾರ್ಗದರ್ಶನದಲ್ಲಿ ಬೆಳೆದವನು ನಾನು ನನ್ನ ಮಾತೃಭಾಷೆ ಬಗ್ಗೆ ಅಪಾರ ಗೌರವವಿದೆ. ನೀವು ಕೂಡ ಕನ್ನಡ ಶಾಲೆಯಲ್ಲಿ ಓದಿ ಮುಂದೆ ಒಳ್ಳೆಯ ಉನ್ನತಮಟ್ಟದ ಹುದ್ದೆಗೆ ಹೋಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಉಪ್ಪುಂದ ನಾಗರಿಕ ವೇದಿಕೆ ಅಧ್ಯಕ್ಷ ರತ್ನಾಕರ ಖಾರ್ವಿ, ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ ಗೋಪಾಲ್ ಪೂಜಾರಿ, ಉಪ್ಪುಂದ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮಿ ಖಾರ್ವಿ, ಬೈಂದೂರು ತಾಲೂಕುವಕೀಲರ ಸಂಘದ ಅಧ್ಯಕ್ಷ ಕೆ ಎಂಶ್ರೀಕಾಂತ್ ಅಡಿಗ, ಕುಂದಾಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ್ ಹೆಗಡೆ ಹಾಜರಿದ್ದರು.
Kshetra Samachara
04/10/2022 03:07 pm