ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ತಾಲೂಕಿನಲ್ಲಿ ಅರ್ಥಪೂರ್ಣ ಬ್ಯಾರಿ ಭಾಷೆ ದಿನಾಚರಣೆ

ಉಡುಪಿ: ಮೂಡಿಗೆರೆ ತಾಲೂಕು ಬ್ಯಾರಿ ಒಕ್ಕೂಟ ಮೂಡಿಗೆರೆ ಇವರ ಆಶ್ರಯದಲ್ಲಿ ಇಂದು ತಾಲೂಕಿನ ಪ್ರೀತಂ ಕಲ್ಯಾಣ ಮಂಟಪದಲ್ಲಿ ಬ್ಯಾರಿ ದಿನ ಆಚರಿಸಲಾಯಿತು. ಕಾರ್ಯಕ್ರಮವನ್ನು ಸಾಂಸ್ಕೃತಿಕ ದಫ್ ಮುಖಾಂತರ ಬ್ಯಾರಿ ಲೋಗೋ ಬಿಡುಗಡೆಗೊಳಿಸಿ ಉದ್ಘಾಟಿಸಿದ ಮಾಜಿ ಜಿಲ್ಲಾ ಬ್ಯಾರಿ ಒಕ್ಕೂಟ ಹಾಗೂ ಮಾಜಿ ರಾಜ್ಯಾಧ್ಯಕ್ಷ ,ಬ್ಯಾರಿ ಅಕಾಡೆಮಿ ಕರ್ನಾಟಕ ಸರ್ಕಾರ ಮೊಹಮ್ಮದ್ ಕೆ ಚಿಕ್ಕಮಗಳೂರು ಮಾತನಾಡಿ, ನಮ್ಮ ಭಾಷೆಗೆ ಈ ಹಿಂದೆಯೇ ಅಕಾಡೆಮಿ ಸಿಕ್ಕಿದೆ.

ಅದರ ಸವಿನೆನಪಿಗಾಗಿ ಇಂದು ನಾವು ಬ್ಯಾರಿ ದಿನವನ್ನು ಆಚರಣೆ ಮಾಡುತ್ತಿದ್ದೇವೆ. ಇದು ನಿರಂತರವಾಗಿ ಇರಬೇಕು ಹಾಗೂ ಈ ನಾಡಿನಲ್ಲಿ ಪ್ರತಿಯೊಂದು ಭಾಷೆಗೂ ಅದರದೇ ಆದ ಸ್ಥಾನಮಾನ ಇದೆ. ಬ್ಯಾರಿ ಜನಾಂಗ ಇಂದು ಈ ನಾಡಿನ ಆಚಾರ ವಿಚಾರ ಸಂಸ್ಕೃತಿ ನೆಲ ಜಲ ಭಾಷೆ ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ನಾಡಿಗೆ ಈ ಜನಾಂಗದ ಕೊಡುಗೆ ಅಪಾರ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಸೈಫ್ ಸುಲ್ತಾನ್ ಮಾತನಾಡಿ ಭಾರತದಲ್ಲಿ ಗುರುತಿಸಲ್ಪಡುವ ಸುಮಾರು 200ಕ್ಕೂ ಅಧಿಕ ಬಾಷೆಗಳಿದ್ದು ಅದರಲ್ಲಿ ಬ್ಯಾರಿ ಭಾಷೆಯನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಅಧಿಕೃತಗೊಳಿಸಿದೆ. ಈ ಭಾಷೆಯು ನಮ್ಮ ಪಕ್ಕದ ಜಿಲ್ಲೆಯಾದ ಮಂಗಳೂರು ಹಾಗೂ ಉಡುಪಿ ಬಿಟ್ಟರೆ ಈ ಜಿಲ್ಲೆಯಲ್ಲಿಯೇ ಅತ್ಯಧಿಕವಾಗಿದೆ. ನಮ್ಮ ಸಂಸ್ಕೃತಿ ನಮ್ಮ ಭಾಷೆಯಾದರೆ ನಮ್ಮ ಭಾಷೆ ನಮ್ಮ ಸಂಸ್ಕೃತಿಯಾಗಿದೆ.

ಅದನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಎಲ್ಲಾ ರಂಗದಲ್ಲೂ ತೊಡಗಬೇಕು ಎಂದರು.ಈ ಸಂದರ್ಭದಲ್ಲಿ ಬ್ಯಾರಿ ಸಮುದಾಯದಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ ವಿವಿಧ ಸಾಧಕರಿಗೆ ಒಕ್ಕೂಟದ ವತಿಯಿಂದ ಸನ್ಮಾನ ಮಾಡಲಾಯಿತು.ಕಾರ್ಯಕ್ರಮದ ವೇದಿಕೆಯಲ್ಲಿ

ಒಕ್ಕೂಟದ ಅಧ್ಯಕ್ಷ BH ಮುಹಮ್ಮದ್,ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಮ್ರಾನ್ ಚಕ್ಕಾಮಕ್ಕಿ, ಖಜಾಂಜಿ ಹಮೀದ್ ಸಬ್ಬೇನ ಹಳ್ಳಿ,ಉಪಾಧ್ಯಕ್ಷ ಹಸನಬ್ಬ ಕೊಟ್ಟಿಗೆಹಾರ,ಮೊಹಮ್ಮದ್ ಹನೀಫ್ ಎಚ್*ಹ್ಯಾಂಡ್ ಪೋಸ್ಟ್ ,ಬದ್ರುದ್ದೀನ್ ಬಿಳಗುಳ

ರಿಜ್ವಾನ್ ಅಲಿLLB ಮೂಡಿಗೆರೆ,ಅಬ್ದುಲ್ ಹಮೀದ್ ಬಿಳಗುಳ,ಅಬ್ದುಲ್ ರಝಾಕ್ HA ಹಂಡುಗುಳಿ,ಅಬ್ದುಲ್ ಕರೀಂ ಅನಜೂರು,ಯಾಕೂಬ್ ಚಕ್ಕಮಕ್ಕಿ,ಮುಂತಾದವರಿದ್ದರು.

Edited By : PublicNext Desk
Kshetra Samachara

Kshetra Samachara

03/10/2022 06:07 pm

Cinque Terre

1.86 K

Cinque Terre

0

ಸಂಬಂಧಿತ ಸುದ್ದಿ