ಮುಲ್ಕಿ:ನೇಕಾರಿಕೆ ಇಂದು ಅಳಿವಿನಂಚಿನಲ್ಲಿದ್ದು ಕೈ ಮಗ್ಗದ ಬಟ್ಟೆಗಳನ್ನು ಖರೀದಿಸಿ ನೇಕಾರಿಕೆಯನ್ನು ಪ್ರೋತ್ಸಾಹಿಸಬೇಕು ಎಂದು ಬಿಜೆಪಿಯ ಮೂಡುಬಿದಿರೆ ಮಂಡಲಾಧ್ಯಕ್ಷ ಸುನೀಲ್ ಅಳ್ವ ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆಯ ಸೇವಾ ಪಾಕ್ಷಿಕದ ಅಂಗವಾಗಿ ಕಿನ್ನಿಗೋಳಿ ಶಕ್ತಿ ಕೇಂದ್ರದ ವತಿಯಿಂದ ಕೈಮಗ್ಗವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೈಮಗ್ಗದ ಬಟ್ಟೆಯನ್ನು ಶಕ್ತಿ ಕೇಂದ್ರದ ಸದಸ್ಯರು ಖರೀದಿಸಿದ ಸಂದರ್ಭ ಮಾತನಾಡಿದರು.
ಈ ಸಂದರ್ಭ ಬಿಜೆಪಿಯ ನಾಯಕರುಗಳಾದ ಈಶ್ವರ್ ಕಟೀಲ್, ಕೇಶವ ಕರ್ಕೇರ,. ಶಕ್ತಿ ಕೇಂದ್ರದ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಅಭಿಲಾಷ್ ಶೆಟ್ಟಿ ಕಟೀಲು, ಈಶ್ವರ್ ಕಟೀಲ್, ಉಮೆಶ್ ಪಂಜ, ಪ್ರಭಾಕರ್ ಕುಲಾಲ್, ಭಾರತಿ ಶೆಟ್ಟಿ, ಸರೋಜಿನಿ ಗುಜರನ್, ಆಶಾ ರತ್ನಾಕರ್ ಸುವರ್ಣ, ಮಾಧವ ಶೆಟ್ಟಿಗಾರ್, ಸಚ್ಚಿದಾನಂದ ಉಡುಪ ಕೊಡೆತ್ತೂರು, ದಾಮೋದರ ಶೆಟ್ಟಿ ಕೊಡೆತ್ತೂರು, ಯಶೋಧ ಶೆಟ್ಟಿಗಾರ್, ತಾಳಿಪಾಡಿ ನೇಕಾರರ ಸಂಘದ ಅಧ್ಯಕ್ಷ ಆನಂದ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
02/10/2022 07:26 pm