ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅ.2 ರಂದು ದುರ್ಗಾ ದೌಡ್ ಕಾರ್ಯಕ್ರಮಕ್ಕೆ ಉಡುಪಿಗೆ ಸಾದ್ವಿ ಪ್ರಜ್ಞಾ ಸಿಂಗ್

ಉಡುಪಿ: ಹಿಂದು ಜಾಗರಣಾ ವೇದಿಕೆ ವತಿಯಿಂದ ಅ.2 ರಂದು ನಡೆಯುವ 'ದುರ್ಗಾ ದೌಡ್' ಕಾರ್ಯಕ್ರಮಕ್ಕೆ ಮಧ್ಯಪ್ರದೇಶದ ಭೋಪಾಲ್ ಸಂಸದೆ ಸಾದ್ವಿ ಪ್ರಜ್ಞಾ ಸಿಂಗ್

ಠಾಕೂರ್ ಉಡುಪಿಗೆ ಆಗಮಿಸಲಿದ್ದಾರೆ. ಕಾರ್ಯಕ್ರಮದ ದಿಕ್ಸೂಚಿ ಭಾಷಣವನ್ನು ಸಾದ್ವಿ ಪ್ರಜ್ಞಾ ಸಿಂಗ್ ಮಾಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಕಲ್ಸಂಕ ಮಾರ್ಗವಾಗಿ ಡಯಾನಾ ಸರ್ಕಲ್‌, ತೆಂಕಪೇಟೆ, ಕೃಷ್ಣಮಠ ರಥಬೀದಿ ತಲುಪಲಿದೆ. ಕೃಷ್ಣಮಠದ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. 10 ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ.ಈಗಾಗಲೇ ದುರ್ಗಾ ದೌಡ್ ಗೆ ಸಾಕಷ್ಟು ಸಿದ್ಧತೆಗಳು ನಡೆದಿವೆ.

Edited By : Shivu K
Kshetra Samachara

Kshetra Samachara

30/09/2022 12:54 pm

Cinque Terre

26.77 K

Cinque Terre

1

ಸಂಬಂಧಿತ ಸುದ್ದಿ