ಪುತ್ತೂರು: ಕನ್ನಡ ಭಾಷೆ ನಿಜವಾದ ಅರ್ಥದಲ್ಲಿ ಉಳಿದಿದೆ, ಉಳಿಯುತ್ತಿದೆ, ಬೆಳೆಯುತ್ತಿದೆ ಎಂದಾದರೆ. ಅದು ಹಳ್ಳಿ, ಹೋಬಳಿ ಮತ್ತು ತಾಲೂಕುಗಳಲ್ಲಿ ಮಾತ್ರ. ಕನ್ನಡ ಸಾಹಿತ್ಯ ಪರಿಷತ್ ಭದ್ರ ಅಡಿಪಾಯ ಹಾಕಿರುವುದು ಹಳ್ಳಿಗಳು, ಹೋಬಳಿಗಳು ಮತ್ತು ತಾಲೂಕುಗಳು. ಹಾಗಾಗಿ ನಾನು ತಾಲೂಕು ಮಟ್ಟ ಮಾತ್ರವಲ್ಲದೆ, ಹೋಬಳಿ, ಗ್ರಾಮ ಮಟ್ಟಕ್ಕೂ ಹೋಗುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ ಜನಸಾಮಾನ್ಯರ ಪರಿಷತ್ ಆಗಬೇಕೆನ್ನುವುದು ನಮ್ಮ ಉದ್ದೇಶ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಅವರು ಹೇಳಿದರು.
ಪುತ್ತೂರಿನ ಬಪ್ಪಳಿಗೆಯಲ್ಲಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಗುರುವಾರ ಆರಂಭಗೊಂಡ ಪುತ್ತೂರು ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಎಷ್ಟು ಭಾಷೆಗಳಿವೆ. ಎಷ್ಟು ಭಾಷೆಗಳು ಅಳಿವಿನ ಅಂಚಿನಲ್ಲಿವೆ. ಎಷ್ಟು ಭಾಷೆಗಳು ಜನರ ಮತ್ತು ಸರಕಾರದ ಪ್ರೇರಣೆಯಿಂದ ಉಳಿದುಕೊಂಡವೆ ಮತ್ತು ಬೆಳೆಯುತ್ತಿವೆ ಎಂಬ ಕುರಿತು ವರ್ಷಕ್ಕೊಮ್ಮೆ ಅಧ್ಯಯನ ನಡೆಯುತ್ತದೆ.
ಅಮೇರಿಕಾದ ಯತ್ನಲಾಗ್ ಸಂಸ್ಥೆಯು ಜಗತ್ತಿನ ಪರಿಪೂರ್ಣ ಭಾಷೆಯಾವುದು ಎಂಬ ಕುರಿತು ಪ್ರಾಚೀನ ಭಾಷೆಯಾಗಿರಬೇಕು, ಸ್ವಂತ ಭಾಷೆ ಭಾಷೆಯಾಗಿರಬೇಕು. ಸ್ವಂತ ಲಿಪಿ ಇರಬೇಕು ಮೊದಲಾದ ಮಾನದಂಡಗಳೊಂದಿಗೆ ಅಧ್ಯಯನ ನಡೆಸಿ ಮೂರು ಭಾಷೆಗಳನ್ನು ಮಾತ್ರ ಪರಿಪೂರ್ಣ ಭಾಷೆ ಎಂದು ಆಯ್ಕೆ ಮಾಡಿದ್ದು,ಇದರಲ್ಲಿ ಇಂಗ್ಲೀಷ್, ಹಿಂದಿ ಭಾಷೆ ಸೇರಿಲ್ಲ. ಆದರೆ ಆಯ್ಕೆ ಮಾಡಿರುವ ಮೂರು ಭಾಷೆಗಳಲ್ಲಿ ಕನ್ನಡ ಭಾಷೆಯೂ ಒಂದು ಎಂದರು.
Kshetra Samachara
30/09/2022 10:30 am