ಕಾರ್ಕಳ : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಸಮಿತಿ, ಕಾಂತಾವರ ಕನ್ನಡ ಸಂಘ ಹಾಗೂ ಕರ್ನಾಟಕ ಗಮಕ ಕಲಾಪರಿಷತ್‌ನ ಸಹಯೋಗದೊಂದಿಗೆ ಕಾರ್ಕಳ ಹೊಟೆಲ್ ಪ್ರಕಾಶ್‌ನ ಸಂಭ್ರಮ ಸಭಾಭವನದಲ್ಲಿ ವರಕವಿ ದ.ರಾ.ಬೇಂದ್ರೆಯವರ ಕನ್ನಡ ಮೇಘದೂತ ಖಂಡ ಕಾವ್ಯದ ಗಮಕ - ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯಾಧ್ಯಕ್ಷ ಹಾಗೂ ಕಾಂತಾವಾರ ಕನ್ನಡ ಸಂಘದ ಅಧ್ಯಕ್ಷ ಡಾ.ನಾ ಮೊಗಸಾಲೆ ಅಧ್ಯಕ್ಷತೆ ವಹಿಸಿದ್ದರು. ವ್ಯಾಖ್ಯಾನಕಾರರಾಗಿ ಡಾ.ರಾಘವೇಂದ್ರ ರಾವ್ ಹಾಗೂ ವಾಚನಕಾರರಾಗಿ ಮಂಜುಳ ಸುಬ್ರಹ್ಮಣ್ಯ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಅ.ಭಾ.ಸಾ.ಪ ಗೌರವಾಧ್ಯಕ್ಷ ಎಸ್.ನಿತ್ಯಾನಂದ ಪೈ, ಅ.ಭಾ.ಸಾ.ಪ ಕಾರ್ಕಳ ಘಟಕದ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಗಮಕ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು ಸ್ವಾಗತಿಸಿ, ಶಾಲಿನಿ ಬಿ.ಎಸ್ ಪ್ರಾರ್ಥಿಸಿದರು. ಅ.ಭಾ.ಸಾ.ಪ ಕಾರ್ಕಳ ಸಮಿತಿಯ ಕಾರ್ಯದರ್ಶಿ ಗಣೇಶ್ ಜಾಲ್ಸೂರು ನಿರೂಪಿಸಿದರು. ಜಿಲ್ಲಾ ಗಮಕ ಪರಿಷತ್ ಕಾರ್ಯದರ್ಶಿ ಗಣಪ್ಪಯ್ಯ ವಂದಿಸಿದರು.
Kshetra Samachara
25/09/2022 07:08 pm