ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಲಾವಿದೆ ಡಾ.ಭಾರತಿ ಮರವಂತೆ 76 ನಿಮಿಷಗಳಲ್ಲಿ 76 ರಾಷ್ಟ್ರಧ್ವಜ ವಿಶ್ವದಾಖಲೆ

ಉಡುಪಿ: ತಮಿಳುನಾಡಿನಲ್ಲಿ ಜಾಕಿಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ಸಂಸ್ಥೆಯವರು(ಜಾಕಿ ಕ್ರಿಯೇಶನ್ಸ್) ಆಯೋಜಿಸಿದ ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 76 ನಿಮಿಷಗಳಲ್ಲಿ 76 ಭಾರತದ ರಾಷ್ಟ್ರಧ್ವಜಗಳನ್ನು ರಂಗೋಲಿಯಲ್ಲಿ ಬಿಡಿಸುವ ದಾಖಲೆಯಲ್ಲಿ ರಂಗೋಲಿ ಕಲಾವಿದ ಡಾ.ಭಾರತಿ ಮರವಂತೆಯವರು ಸಂಪೂರ್ಣ ಯಶಸ್ವಿಯಾಗಿದ್ದಾರೆ.

ದಿನಾಂಕ-21-ಆಗಸ್ಟ್-2022ರಂದು ಅಂತರ್ಜಾಲದ ಮೂಲಕ ಡಾ.ಭಾರತಿ ಮರವಂತೆಯವರು ಸಂಸ್ಥೆಯವರು ಸೂಚಿಸಿದ ನಿರ್ದಿಷ್ಟ ಸಮಯದಲ್ಲಿ 76 ನಿಮಿಷಗಳಲ್ಲಿ 76 ಭಾರತದ ರಾಷ್ಟ್ರಧ್ವಜಗಳನ್ನು ಅನನ್ಯ ಕೌಶಲದಿಂದ ಏಕವ್ಯಕ್ತಿಯಾಗಿ ಬೃಹತ್ ಗಾತ್ರದ(30 25ಅಡಿ)ಲ್ಲಿ ಧ್ವಜದ ಪ್ರಮಾಣತೆಗೆ ಅನುಗುಣವಾಗಿ (2ಅನುಪಾತದಲ್ಲಿ ಮತ್ತು ತ್ರಿವರ್ಣ-ಚಕ್ರ)ವನ್ನು 76 ರಾಷ್ಟ್ರಧ್ವಜಗಳನ್ನು 76 ನಿಮಿಷಗಳ ಅವಧಿಗೆ ಮುಂಚಿತವಾಗಿ ಪೂರ್ಣಗೊಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ದೇಶಭಕ್ತಿ ಹುಟ್ಟಿಸುವ ಈ ಕಲಾ ಪ್ರದರ್ಶನದಲ್ಲಿ ಜಾಗತಿಕ ಮಟ್ಟದಲ್ಲಿ ವಿವಿಧ ರಾಷ್ಟ್ರಗಳ ಕಲಾವಿದರು. ವಿವಿಧ ಕೌಶಲ್ಯಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ತಮಿಳುನಾಡಿನ ಜಾಕಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯವರು ನೀಡಿರುವ ಪ್ರಮಾಣಪತ್ರ, ಟ್ರೋಪಿ, ಮೆಡಲ್, ಬ್ಯಾಡ್ಜ್, ಟಿಶರ್ಟ್ ಇತ್ಯಾದಿಗಳನ್ನು ನೀಡಿ ಡಾ.ಭಾರತಿ ಮರವಂತೆಯವರನ್ನು ಗೌರವಿಸಿದರು.

Edited By : PublicNext Desk
Kshetra Samachara

Kshetra Samachara

21/09/2022 03:34 pm

Cinque Terre

1.29 K

Cinque Terre

0