ಮಂಗಳೂರು: ಕರ್ನಾಟಕ ಮಲಯಾಳಿ ವಿಶ್ವಕರ್ಮ ಸಮುದಾಯದ ಜನರು ಒಣಂ ಹಬ್ಬವನ್ನು ಸಂಭ್ರಮ ಸಡಗರದಿಂದ ಅಚರಿಸಿದ್ರು.
ಮಹಾಬಲಿ ರಾಜ, ಘೋಷಯಾತ್ರೆ ,ಚೆಂಡೆ ಎಲ್ಲಾರ ಗಮನ ಸೆಳೆಯಿತು. ನಗರದ ನವಭಾರತ್ ಸರ್ಕಲ್ ನಿಂದ ಕುದ್ರೋಳಿ ಭಗವತೀ ಕ್ಷೇತ್ರದ ತನಕ ಮೆರವಣಿಗೆ ನಡೆಯಿತು. ಮೆರವಣಿಗೆ ಮಲಯಾಳಿ ಸಮುದಾಯದ ಮಹಿಳೆಯರು ಸಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸಿದ್ರು.
ಕುದ್ರೋಳಿ ಭಗವತೀ ದೇವಸ್ಥಾನದ ಭಗವತೀ ಕೂಟಕ್ಕಳ ಸಭಾಂಗಣದಲ್ಲಿ ನಲ್ಲಿ ಒಣಂ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.ಅಥಾಚಮಯಂ ಓಣಂ ಮೊದಲ ಹಬ್ಬವಾಗಿದೆ. ಇದು ಮಹಾಬಲಿ ರಾಜ ತನ್ನ ರಾಜ್ಯಕ್ಕೆ ಹಿಂದಿರುವ ಸಿದ್ಧತೆಯ ದಿನ. ಈ ದಿನ ವಾಮನಮೂರ್ತಿ ತಿರ್ರಿಕರ ದೇವಸ್ಥಾನದಲ್ಲಿ ಮತ್ತು ಕೊಚ್ಚಿಯಾದ್ಯಂತ ಅದ್ದೂರಿ ಆಚರಣೆ, ಮೆರವಣಿಗೆ ನಡೆಯುತ್ತದೆ. ಈ ದಿನ ಹಳದಿ ಹೂವಿನ ಅಲಂಕಾರ ಮಾಡಲಾಗುವುದು.
PublicNext
18/09/2022 03:29 pm