ಮುಲ್ಕಿ: ಭಜನೆಯಿಂದ ಶ್ರೀ ಕ್ಷೇತ್ರದ ಸಾನ್ನಿಧ್ಯ ವೃದ್ಧಿಯಾಗುವುದರ ಜೊತೆಗೆ ಗ್ರಾಮದಲ್ಲಿ ಸರ್ವ ರೋಗಗಳು ಕಷ್ಟಕಾರ್ಪಣ್ಯಗಳು ಪರಿಹಾರವಾಗಿ ನೆಮ್ಮದಿ ಸಾಧ್ಯ ಎಂದು ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಶೆಟ್ಟಿ ಹೇಳಿದರು.ಅವರು ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಭಜನಾ ಮಂಗಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಷೇತ್ರದ ಅರ್ಚಕ ಪುರುಷೋತ್ತಮ್ ಭಟ್ ಶ್ರೀದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು. ಗ್ರಾಪಂ ಸದಸ್ಯರಾದ ಪದ್ಮಿನಿ ಶೆಟ್ಟಿ, ವಿಕಾಸ್ ಶೆಟ್ಟಿ,ಸೀತಾರಾಮ್ ಭಟ್, ಶ್ರೀಪತಿ ಭಟ್, ಉದ್ಯಮಿ ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ, ಉದಯಕುಮಾರ್ ಶೆಟ್ಟಿ ಆದಿಧನ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ದಿನೇಶ್ಚಂದ್ರ ಅಜಿಲ, ಹರೀಶ್ ಶೆಟ್ಟಿ, ಶಶಿಕಲಾ,ಯುವಕ ಮಂಡಲದ ಅಧ್ಯಕ್ಷ ಕಿಶೋರ್ ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್, ಸ್ಥಳೀಯರಾದ ಶಂಕರ್ ಮಾಸ್ಟರ್, ಪ್ರಬಂಧಕ ಕಿಶೋರ್ ಶೆಟ್ಟಿ, ಪತ್ರಕರ್ತ ಪುನೀತ್ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು. ಗೋಪಾಲ್ ಶಿಮಂತೂರು ನಿರೂಪಿಸಿದರು.
Kshetra Samachara
18/09/2022 02:30 pm