ಮುಲ್ಕಿ: ಸಮೀಪದ ದೇವರಬೆಟ್ಟು ಬೆಳ್ಳಾಯರು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಜೀರ್ಣೋದ್ದಾರ, ಅಷ್ಟ ಬಂದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಆರೂಢ ಪ್ರಶ್ನೆಯಲ್ಲಿ ಕಂಡು ಬಂದಂತೆ ದ್ವಾದಶ ನಾರಿಕೇಲ ಅಷ್ಟ ದ್ರವ್ಯ ಮಹಾಗಣಪತಿಯಾಗ, ಮಹಾ ಮೃತ್ಯುಂಜಯ ಯಾಗ ಅಶ್ಲೇಷ ಬಲಿ ಪೂರ್ವಕವಾಗಿ ದೇವಸ್ಥಾನದ ತಂತ್ರಿಗಳಾದ ದೇರೇಬೈಲ್ ಶಿವಪ್ರಸಾದ್ ತಂತ್ರಿ ಹಾಗೂ ವಿದ್ವಾನ್ ಪಂಜ ಭಾಸ್ಕರ ಭಟ್ ನೇತೃತ್ವದಲ್ಲಿ ಸಾಮೂಹಿಕ ಮುಷ್ಥಿ ಕಾಣಿಕೆ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಅಷ್ಟ ದ್ರವ್ಯ ಮಹಾಗಣಪತಿಯಾಗ,ಮಹಾ ಮೃತ್ಯುಂಜಯ ಯಾಗ, ಪ್ರಾಯಶ್ಚಿತ್ತ ಕೂಷ್ಮಾಂಡ ಹೋಮ,ಪೂರ್ವಕ ಅಶ್ಲೇಷ ಬಲಿ , ಸಪರಿವಾರ ಚಂದ್ರಮೌಳೀಶ್ವರ ದೇವರಿಗೆ ಪರಮಾನ್ನ, ನೈವೇದ್ಯ ಮಹಾ ಪೂಜೆ ನಡೆಯಿತು.
ಮಧ್ಯಾಹ್ನ ವಿಶೇಷ ಸಾಮೂಹಿಕ ಪ್ರಾರ್ಥನೆ ಹಾಗೂ ಮುಷ್ಥಿ ಕಾಣಿಕೆ ಸಮರ್ಪಣೆ, ವಿಶೇಷ ಭಜನಾ ಸೇವೆ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಸಂಜೆ ದುರ್ಗಾ ನಮಸ್ಕಾರ ಪೂಜೆ ನಡೆಯಿತು.
ಈ ಸಂದರ್ಭ ಅರ್ಚಕ ಗೋಪಾಲ ಭಟ್, ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಪಾದೆಮನೆ ಜಯಂತ ರೈ, ಬಪ್ಪನಾಡು ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮುಕ್ತೇಸರ ಮನೋಹರ ಶೆಟ್ಟಿ, ಹರಿದಾಸ್ ಭಟ್ ತೋಕೂರು, ಅಕ್ಷಯ್ ಕುಮಾರ್, ಸಮಿತಿಯ ಕಾರ್ಯಾಧ್ಯಕ್ಷ ಶೇಖರ ಶೆಟ್ಟಿ, ವಿದ್ಯಾಧರ ಶೆಟ್ಟಿ ಕೋಲ್ನಾಡು, ವಿನೋದ್ ಎಸ್ ಸಾಲ್ಯಾನ್, ವಿಜಯ ಶೆಟ್ಟಿ, ಕಾರ್ಯದರ್ಶಿ ಕೃಷ್ಣ ಭಟ್, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ, ಸಮಿತಿಯ ರಾಮಚಂದ್ರ ನಾಯ್ಕ, ಕಾಂತಣ್ಣ ಗುರಿಕಾರ, ಮಾಧವ ಶೆಟ್ಟಿ ಉತ್ರಂಜೆ, ನಿರುಪಮ ಶೆಟ್ಟಿ,ಸವಿತಾ ಶರತ್ ಬೆಳ್ಳಾಯರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
10/09/2022 03:23 pm