ಮುಲ್ಕಿ: ಕಾರ್ನಾಡ್ ಕೊಸೆಸಾಂ ಅಮ್ಮನವರ ಚರ್ಚ್ ವತಿಯಿಂದ ತೆನೆಹಬ್ಬ ಮೋಂತಿ ಪೆಸ್ತ್ ವಿಶೇಷ ಆರಾಧನೆ ಗುರುವಾರ ನಡೆಯಿತು.
ಬಾಲೆ ಮರಿಯಮ್ಮ ನವರ ಮೂರ್ತಿಯ ಎದರು ತೆನೆಗಳನ್ನು ಇರಿಸಿ ಶಾಂತಿ ಸಂಮೃದಿಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಮುಲ್ಕಿ ಡಿವೈನ್ ಪಾರ್ಕ್ ನಿರ್ದೇಶಕರಾದ ವಂ.ಅಬ್ರಹಾಂ ಡಿಸೋಜ ಆಶೀರ್ವಚನ ನೀಡಿ ತೆನೆ ಶುದ್ದೀಕರಿಸಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.
ಮುಲ್ಕಿ ಚರ್ಚ್ ಧರ್ಮಗುರು ವಂ.ಸಿಲ್ವೆಸ್ಟರ್ ಡಿಕೋಸ್ಟಾ ಪೂಜಾವಿಧಿ ನೆರವೇರಿಸಿದರು. ಬಳಿಕ ಧರ್ಮ ಸಭಾ ಸದಸ್ಯರು ಮೆರವಣಿಗೆಯಲ್ಲಿ ಚರ್ಚ್ ಗೆ ತೆನೆಗಳನ್ನು ಕೊಂಡುಹೋಗಿ ಪೂಜೆಯ ಬಳಿಕ ತೆನೆ ವಿತರಿಸಿದರು. ಈ ಸಂದರ್ಭ ವಂ. ಜೋಲಿ ಅಬ್ರಾಹಾಂ ಎಸ್ವಿಡಿ, ಮುಲ್ಕಿ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಓಸ್ವಲ್ಡ್ ಕೊರೆಯಾ, ಕಾರ್ಯದರ್ಶಿ ಜೋವಿನ್ ಪ್ರಕಾಶ್ ಡಿಸೋಜ, ವಾರ್ಡ್ ಗುರಿಕಾರರು , ಧರ್ಮ ಸಭಾ ಸದಸ್ಯರು ಉಪಸ್ಥಿತರಿದ್ದರು.
Kshetra Samachara
08/09/2022 07:12 pm