ಮಂಗಳೂರು: ನಗರದ ಹೊರವಲಯದ ಕೂಳೂರು ಹಿಂದು ಜಾಗರಣ ವೇದಿಕೆ ಪರಶುರಾಮ ಶಾಖೆ ಹಾಗೂ ಧೂಮಾವತಿ ಫೈಂಡ್ಸ್ ಕೂಳೂರು ಮತ್ತು ಲಯನ್ಸ್ ಕ್ಲಬ್ ಮಂಗಳೂರು ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಸಹಕಾರದಲ್ಲಿ ಕೂಳೂರಿನ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಮಂದಿರ (ರಿ) ದಲ್ಲಿ ನಡೆದ ರಕ್ತದಾನ ಶಿಬಿರವನ್ನು ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ದಿ ಚೇತನ್ ದೇವಾಡಿಗ ಇವರ ಸ್ಮರಣಾರ್ಥವಾಗಿ ನಡೆದ ರಕ್ತದಾನ ಶಿಬಿರದಲ್ಲಿ ವಿವಿಧ ಸಮಾಜ ಸೇವಾ ಸಂಘಟನೆಯ ಪ್ರಮುಖರು, ಆಯೋಜಕರು, ಗಣ್ಯರು ಉಪಸ್ಥಿತರಿದ್ದರು.
Kshetra Samachara
04/09/2022 04:34 pm