ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಸ್ಟೆಪ್ ಹಾಕಿದ ನಟ ಅರ್ಜುನ್ ಕಾಪಿಕಾಡ್!!

ಮುಲ್ಕಿ: ಕಿನ್ನಿಗೋಳಿಯ 48ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಯಲ್ಲಿ ತುಳು ಚಿತ್ರರಂಗದ ಆ್ಯಕ್ಷನ್ ಕಿಂಗ್ ಎಂದೇ ಪ್ರಸಿದ್ಧಿ ಪಡೆದಿರುವ ನಟ ನಿರ್ದೇಶಕ ಅರ್ಜುನ್ ಕಾಪಿಕಾಡ್ ರವರು ಅಬ್ಬರದ ಪಿಲಿ ನಲಿಕೆ ಸ್ಟೆಪ್ ನ್ನು ಹಾಕಿ ಗಮನ ಸೆಳೆದು ಎಲ್ಲರನ್ನು ರಂಜಿಸಿದರು.

ಕಿನ್ನಿಗೋಳಿಯ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಯು ವಿವಿಧ ಭಜನಾ ತಂಡಗಳು ಹಾಗೂ ಬಿರುದಾವಳಿಗಳೊಂದಿಗೆ ಸಾಗುತ್ತಿದ್ದ ವೇಳೆಯಲ್ಲಿ ಗಣೇಶೋತ್ಸವಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದ ನಟ ಅರ್ಜುನ್ ಕಾಪಿಕಾಡ್ ಕರಾವಳಿಯ ಪ್ರಸಿದ್ಧ "ಪಿಲಿನಲಿಕೆ" ಗೆ ಹೆಜ್ಜೆ ಹಾಕಿದ್ದಾರೆ.

ಈ ಸಂದರ್ಭ ಸಾರ್ವಜನಿಕರು ನಟ ದೊಂದಿಗೆ ಕುಣಿದು ಸಂಭ್ರಮಿಸಿದರು. ಬಳಿಕ ಗಣೇಶೋತ್ಸವದ ಮೆರವಣಿಗೆಯು ಸಾಗಿ ಕಟೀಲು ನಂದಿನಿ ನದಿಯಲ್ಲಿ ಗಣೇಶನ ವಿಗ್ರಹ ವಿಸರ್ಜನೆ ಕಾರ್ಯಕ್ರಮ ನಡೆಯಿತು.

Edited By : Nagesh Gaonkar
Kshetra Samachara

Kshetra Samachara

02/09/2022 09:05 pm

Cinque Terre

9.29 K

Cinque Terre

0

ಸಂಬಂಧಿತ ಸುದ್ದಿ