ಕಾರ್ಕಳ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಕಾರ್ಕಳ ಸಮೂಹ ಸಂಪನ್ಮೂಲ ಕೇಂದ್ರ ಜಯಂತಿ ನಗರ ಇದರ ಜಂಟಿ ಆಶ್ರಯದಲ್ಲಿ ಸ.ಹಿ.ಪ್ರಾ.ಶಾಲೆ ಅಯ್ಯಪ್ಪನಗರ* ಮತ್ತು ವಿಜೇತ ವಿಶೇಷ ಶಾಲೆಯ ಸಹಯೋಗದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನಾ ಕಾರ್ಯಕ್ರಮ ವಿಜೇತ ವಿಶೇಷ ಶಾಲೆಯಲ್ಲಿ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೆಂಕಟೇಶ್ ಜಿ ನಾಯಕ್ ಇವರು ದೀಪ ಪ್ರಜ್ವಲನದೊದೊಂದಿಗೆ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಶಶಿಮಣಿ ಇವರು ವಹಿಸಿದ್ದು ಮುಖ್ಯ ಅತಿಥಿಗಳಾಗಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ನೋಡೆಲ್ ಅಧಿಕಾರಿಗಳುವೆಂಕಟೇಶ್ ಕಲ್ಕೂರು, ECO ಬಾಲಕೃಷ್ಣ ನಾಯಕ್, ಬಿ. ಆರ್. ಪಿ ಸಂತೋಷ್ ಕುಮಾರ್ ಶೆಟ್ಟಿ, ಬಿ.ಆರ್.ಸಿ ಸಂಯೋಜಕರು ಪ್ರವೀಣ್ ಶೆಟ್ಟಿ, ಕುಕ್ಕುಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಅನಿಲ್ ಪೂಜಾರಿ ನೆಲ್ಲಿಗುಡ್ಡೆ, ಸದಸ್ಯರು ರವಿ ಶೆಟ್ಟಿ, ಜಯಂತಿನಗರ ಕ್ಲಸ್ಟರ್ ಸಿ.ಆರ್.ಪಿ ಪ್ರೇಮಾ ಕುಮಾರಿ, ಸ.ಹಿ.ಪ್ರಾ.ಶಾಲೆ ಅಯ್ಯಪ್ಪನಗರ ಎಸ್. ಡಿ. ಎಮ್. ಸಿ ಅಧ್ಯಕ್ಷರು ಸದಾನಂದ್ ಪುರೋಹಿತ್, ಮುಖ್ಯೋಪಾಧ್ಯಾಯರು ಪ್ರಭಾವತಿ, ವಿಜೇತ ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿ ಆರ್ ಪಿ ಪ್ರೇಮ ಕುಮಾರಿ ಇವರನ್ನು ಗೌರವಿಸಲಾಯಿತು. ಶಿಕ್ಷಕಾ ಮಂಜೇ ಗೌಡ ಇವರು ನಿರೂಪಿಸಿದ ಕಾರ್ಯಕ್ರಮದಲ್ಲಿ , ಡಾ. ಕಾಂತಿ ಹರೀಶ್ ಸ್ವಾಗತಿಸಿ, ಪ್ರೇಮಾ ಕುಮಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
Kshetra Samachara
02/09/2022 04:48 pm