ಮುಲ್ಕಿ: ಇತಿಹಾಸ ಪ್ರಸಿದ್ಧ ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ, ಅನುಜ್ಞಾ ಕಲಶ ನಿಮಿತ್ತ ದೇವಸ್ಥಾನದಲ್ಲಿ ಲಕ್ಷ ಬಿಲ್ವಾರ್ಚನೆ ನಡೆಯಿತು.
ಬೆಳಗ್ಗೆ 7 ಗಂಟೆಗೆ ಪಡುಪಣಂಬೂರಿನ ಮುಲ್ಕಿ ಸೀಮೆಯ ಅರಮನೆಯಲ್ಲಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ದೀಪ ಪ್ರಜ್ವಲನೆ ಮೂಲಕ ಭವ್ಯವಾದ ಮೆರವಣಿಗೆಯಲ್ಲಿ "ಮಂತ್ರಃ ದಾರಿದ್ರ ದುಖಃ ದಹನಾಯ ನಮಃ ಶಿವಾಯ" ಮಂತ್ರ ಪಠಣ ದೊಂದಿಗೆ ಬಿಲ್ವಪತ್ರೆಗಳನ್ನು ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನಕ್ಕೆ ತಂದು ಶ್ರೀ ದೇವರಿಗೆ ಸಮರ್ಪಿಸಲಾಯಿತು. ಬಳಿಕ ದೇವಸ್ಥಾನದ ತಂತ್ರಗಳನ್ನು ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಮುಲ್ಕಿ ಅರಮನೆಯ ಗೌತಮ್ ಜೈನ್, ಎಸ್ ಕೆಪಿಎನ್ ಮೋಹನ್ ರಾವ್ ಕೃಷ್ಣ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
01/09/2022 02:59 pm