ಉಡುಪಿ: ಉಡುಪಿಯಲ್ಲಿ ಅಷ್ಠಮಿ ಸಂದರ್ಭ ಹುಲಿಕುಣಿತ ಸಾಮಾನ್ಯ. ಅಷ್ಠಮಿಗೆ ಹುಲಿಕುಣಿತ ಇಲ್ಲದಿದ್ದರೆ ಹಬ್ಬವೇ ಅಪೂರ್ಣ ಎಂಬಷ್ಟರ ಮಟ್ಟಿಗೆ ಹಾಸುಹೊಕ್ಕಾಗಿದೆ. ಹಾಗಂತ ಬೇರೆ ಹಬ್ಬಗಳಲ್ಲಿ ಹುಲಿವೇಷಗಳಿದ್ದರೂ ಅದು ಕಡಿಮೆ ಪ್ರಮಾಣದಲ್ಲಿರುತ್ತೆ.
ಇವತ್ತು ನಗರದ ಬ್ರಹ್ಮಗಿರಿಯಲ್ಕಿರುವ ಕಾಂಗ್ರೆಸ್ ಭವನದ ಮುಂಭಾಗ ಸುಮಾರು ಅರ್ಧ ತಾಸು ನಡೆದ ಹುಲಿ ಕುಣಿತ, ಹಬ್ಬದ ಮೂಡ್ ನಲ್ಲಿದ್ದ ಜನರನ್ನು ರಂಜಿಸಿತು. ಹತ್ತಾರು ಹುಲಿವೇಷಧಾರಿಗಳು ವಿಶೇಷ ರೀತಿಯ ಕುಣಿತದ ಮೂಲಕ ಸ್ಥಳೀಯರ ಜನಮನ ಗೆದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಸಾವಿರಾರು ರೂ.ಗಳ ಕಂತೆ ಹಣ ನೀಡಿ ವೇಷಧಾರಿಗಳನ್ನು ಖುಷಿಗೊಳಿಸಿದರು.
Kshetra Samachara
31/08/2022 03:19 pm