ಮೂಡುಬಿದಿರೆ: ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಬಿಜೆಪಿಯ ಹಿರಿಯ ನಾಗರಿಕರ ಪ್ರಕೋಷ್ಠ ಮುಲ್ಕಿ ಮೂಡುಬಿದಿರೆ ಮಂಡಲದಿಂದ ಪಕ್ಷ ಸಂಘಟಿಸಿರುವ ಹಿರಿಯರಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಭಾನುವಾರ ಸಮಾಜ ಮಂದಿರದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ನಾಗರಿಕರ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ರಾಷ್ಟ್ರೀಯ ಮಟ್ಟದಲ್ಲಿ ಸಂಘಟನೆಗೆ ರೂಪ ಬಂದಾಗ ಹಿರಿಯ ನಾಗರಿಕರ ಪ್ರಕೋಷ್ಠವನ್ನು ಪ್ರಾರಂಭಿಸಲಾಗಿದೆ. ಒಂದು ಪರಂಪರೆ ಇದೆ ಹಾಗೂ ಗೌರಯುತವಾದಂತಹ ಸಂಸ್ಕೃತಿ ಇದೆ. ಇದನ್ನು ತಲೆಮಾರುಗಳ ಕಾಲ ಕೊಟ್ಟದ್ದರ ಪರಿಣಾಮವಾಗಿ ನಾವು ಗೌರವಯುತವಾದಂತಹ ಬದುಕನ್ನು ಕಟ್ಟಿಕೊಳ್ಳುವಂತಹ ಜೀವನ ಮೌಲ್ಯಗಳನ್ನು ಕೊಟ್ಟಂತಹ ಒಂದು ದೊಡ್ಡ ಪರಂಪರೆಯ ವಾರೀಸುದಾರರು ನಾವು, ಈ ಬದಲಾಗುತ್ತಿರುವ ಭಾರತದಲ್ಲಿ ನಮ್ಮದಾದಂತಹ ರೀತಿಯಲ್ಲಿ ಏನಾದರೂ ಒಂದು ಕೊಡುಗೆ ನೀಡಬೇಕಂಬ ಪ್ರಾಮಾಣಿಕತೆ, ಕಳಕಳಿ ಹಿರಿಯರಿಗಿದೆ. ಆದ್ದರಿಂದ ಈ ಪ್ರಕೋಷ್ಠವನ್ನು ಆರಂಭಿಸಲಾಗಿದೆ ಎಂದರು.
ಮಂಡಲದ ಅಧ್ಯಕ್ಷ ಸುನೀಲ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಹಿರಿಯರ ಪ್ರಕೋಷ್ಠದ ಮೂಲಕ ಹಿರಿಯರನ್ನು ಗುರುತಿಸುವುದು, ಗೌರವಿಸುವುದು ಹಾಗೂ ಸಾಮಾಜಿಕವಾದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಾಗಿದೆ. ಇದು ಒಂದು ಉತ್ತಮ ಕಾರ್ಯ ಎಂದರು.
'ಭಾರತ ಬಲಿಷ್ಠ ಹಿಂದೂ ರಾಷ್ಟ್ರ ಇಂದು ಇಂದು ಎಂದೆಂದಿಗೂ' ಎಂಬ ವಿಷಯದ ಕುರಿತು ವಾಗ್ಮಿ ಪ್ರಕಾಶ್ ಮಲ್ಪೆ ವಿಶೇಷ ಉಪನ್ಯಾಸ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಆರ್.ಪಂಡಿತ್, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್,
ಬಿಜೆಪಿ ಮುಖಂಡರಾದ ಕಸ್ತೂರಿ ಪಂಜ, ಈಶ್ವರ್ ಕಟೀಲ್, ಗೋಪಾಲ್ ಶೆಟ್ಟಿಗಾರ್, ಸುಕೇಶ್ ಶೆಟ್ಟಿ, ಕೇಶವ ಕರ್ಕೆರಾ ಉಪಸ್ಥಿತರಿದ್ದರು.
Kshetra Samachara
22/08/2022 11:12 am