ಮುಲ್ಕಿ: ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಹಾಗೂ ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ (ರಿ.) ಹರಿಪಾದ ಆಶ್ರಯದಲ್ಲಿ ಪಕ್ಷಿಕೆರೆ ಚರ್ಚ್ ನಿಂದ ಹರಿಪಾದೆ ಯ ತನಕ ರಸ್ತೆಯ ಬದಿಯಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ಶ್ರಮದಾನ ಮೂಲಕ ನಡೆಯಿತು.
ಈ ಸಂದರ್ಭದಲ್ಲಿ ಕೆಮ್ರಾಲ್ ಗ್ರಾಮ ಅಧ್ಯಕ್ಷೆ ಲೀಲಾ ಕೃಷ್ಣಪ್ಪ ಮಾತನಾಡಿ ಸ್ವಚ್ಛತೆ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸುತ್ತಿರುವ ಸಂಘಟನೆಗಳ ಕಾರ್ಯ ಅಭಿನಂದನೀಯ ಎಂದರು.
ಮಾಜಿ ಪಂಚಾಯತ್ ಅಧ್ಯಕ್ಷ ನಾಗೇಶ್ ಬೊಳ್ಳೂರು ಪಂಚಾಯತ್ ಸದಸ್ಯರಾದ ಹರಿ ಪ್ರಸಾದ್ ಶೆಟ್ಟಿ,ಸಾಲು ಮರದ ತಿಮ್ಮಕ್ಕ ಅಭಿಮಾನಿ ಬಳಗ ಪಕ್ಷಿಕೆರೆ ಯ ಅಧ್ಯಕ್ಷ ವಾಲ್ಟರ್ ಡಿಸೋಜಾ ಪಕ್ಷಿಕೆರೆ ಚಂದ್ರಶೇಖರ್ (ಕೆಂಚ) ಕೊಯಿಕುಡೆ,ನವೀನ್ ಶೆಟ್ಟಿ ಪಾದೆ ಮನೆ ಕೊಯಿಕುಡೆ ಹರ್ಷ ಕೊಂಗನಾಲ್ ಪಕ್ಷಿಕೆರೆ. ಸುರೇಶ್ ಪೂಜಾರಿ ಮಕರ ಜ್ಯೋತಿ ಪಂಜ, ಚೇತನ್ ಟೈಲರ್ ಕಾಪಿಕಾಡು ಹಾಗೂ ಹರಿ ಸ್ಪೋರ್ಟ್ಸ್ ಕ್ಲಬ್ (ರಿ.)ನ ಗೌರವಾಧ್ಯಕ್ಷ ರಾಮದಾಸ್ ಶೆಟ್ಟಿ ಅಧ್ಯಕ್ಷ ರವಿಚಂದ್ರ,ಉಪಾಧ್ಯಕ್ಷ ಶಂಕರ ಕಾಪಿಕಾಡು ಶ್ರಮಧಾನದಲ್ಲಿ ಭಾಗವಹಿಸಿದ್ದರು.
Kshetra Samachara
22/08/2022 10:09 am