ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಕೊರೊನಾ ಫೈಟರ್ಸ್ ಸುಮುಖ ಸರ್ಜಿಕಲ್ಸ್ ಸಂಸ್ಥೆಯಲ್ಲಿ ಅಮೃತೋತ್ಸವ

ಬೈಂದೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸದ ಸಂದರ್ಭ ಕೊರೊನಾ ವಾರಿಯರ್ಸ್‌ಗೆ ಹಗಲು ರಾತ್ರಿ ಪರಿಕರಗಳನ್ನು ಒದಗಿಸುವ ಮೂಲಕ ದುಡಿದ ಸುಮುಖ ಸರ್ಜಿಕಲ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ಸಂಸ್ಥೆಯಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲಾಯಿತು.

ಧ್ವಜಾರೋಹಣ ಮಾಡಿ ಮಾತನಾಡಿದ, ಸುಮುಖ ಗ್ರೂಫ್ ಆಫ್ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕ ಬಿ.ಎಸ್.ಸುರೇಶ್ ಶೆಟ್ಟಿ, ಗ್ರಾಮೀಣ ಭಾಗದ ಜನರ ಬದುಕು ಉಜ್ವಲವಾದಾಗ ದೇಶದ ಸ್ವಾತಂತ್ರ್ಯಕ್ಕೆ ಅರ್ಥ ಸಿಗುತ್ತದೆ ಆ ನಿಟ್ಟಿನಲ್ಲಿ ಉದ್ಯಮಗಳು ಗ್ರಾಮ ಮಟ್ಟದಲ್ಲಿ ಅಭಿವೃದ್ಧಿಯಾಗಬೇಕು ಎಂದರು.

ಸಂಸ್ಥೆಯ ಸಹ ನಿರ್ದೇಶಕ ಯು ಪಾಂಡುರಂಗ ಪಡಿಯಾರ್ ಮಾತನಾಡಿ, ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಗ್ರಾಮಗಳಿಂದ ಆರಂಭವಾಗಬೇಕಾಗಿದೆ ಎಂದರು. ಸಂಸ್ಥೆಯ ಮಹಿಳಾ ಸಿಬ್ಬಂದಿಗಳು ದೇಶಭಕ್ತಿ ಗೀತೆಗಳನ್ನು ಹಾಡಿದರು.

Edited By : Nagesh Gaonkar
Kshetra Samachara

Kshetra Samachara

15/08/2022 11:03 pm

Cinque Terre

14.11 K

Cinque Terre

2

ಸಂಬಂಧಿತ ಸುದ್ದಿ