ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ತ್ರಿವರ್ಣದಲ್ಲಿ ಕಂಗೊಳಿಸಿದ ಡಾ.ಕೋಟ ಶಿವರಾಮ ಕಾರಂತ ಥೀಂ ಪಾರ್ಕ್

ಕುಂದಾಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಡಾ.ಕೋಟ ಶಿವರಾಮ ಕಾರಂತರ ಹುಟ್ಟೂರು ಕೋಟದಲ್ಲಿರುವ ಕಾರಂತ ಥೀಂ ಪಾರ್ಕ್ ಮೊದಲ ಬಾರಿ ತ್ರಿವರ್ಣದಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಾಕರ್ಷಣೆ ಕೇಂದ್ರಬಿಂದು ಎನಿಸಿದೆ. ಕಾರಂತ ಥೀಂ ಪಾರ್ಕ್ ನಲ್ಲಿರುವ ಬ್ಯಾಲೆ ಜಟಾಯು, ಕಥೆ ಹೇಳುವ ಮೂಕಜ್ಜಿ, ಎತ್ತಿನಗಾಡಿ ಸಾಹುಕಾರ, ತೆಂಕುಬಡಗಿನ ಯಕ್ಷಗಾನ ವೇಷಧಾರಿಗಳು, ಕಾರಂತರಿಗೆ ಜ್ಞಾನಪೀಠ ತಂದುಕೊಟ್ಟ ಮೂಕಜ್ಜಿ ಕನಸು ಕೃತಿ, ಬಡುಗುತಿಟ್ಟಿನ ರಾಧಕೃಷ್ಣ, ಜೋಮನ ದುಡಿಯ ಚೋಮ ಮೊದಲಾದ ಕಲಾಕೃತಿಗಳು ಇಂದು ವಿಶೇಷವಾಗಿ ಕಂಡು ಬಂದವು.

ಕಾರಂತ ಥೀಂ ಪಾರ್ಕ್ ಒಳಪ್ರಾಂಗಣದ ಪ್ರವೇಶ ದ್ವಾರದ ಪಕ್ಕದಲ್ಲಿರುವ ಡಾ.ಕೋಟ ಶಿವರಾಮ ಕಾರಂತರ ಪ್ರತಿಕೃತಿ ತ್ರಿವರ್ಣದಲ್ಲಿ ರಾರಾಜಿಸುತ್ತಿದೆ.ಇದಲ್ಲದೆ ಕಾರಂತ ಥೀಂ ಪಾರ್ಕ್ ನಲ್ಲಿ ಸಂಗೀತ ಕಾರಂಜಿಯ ಪ್ರದರ್ಶನ ಆಯೋಜಿಸಲಾಗಿದ್ದು ಸ್ಥಳೀಯರು ಈ ಪ್ರದರ್ಶನವನ್ನು ಕಣ್ತುಂಬಿಕೊಂಡರು.

Edited By : Nagesh Gaonkar
Kshetra Samachara

Kshetra Samachara

13/08/2022 10:37 pm

Cinque Terre

13.97 K

Cinque Terre

1

ಸಂಬಂಧಿತ ಸುದ್ದಿ