ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ : ಕರಾವಳಿ ರಕ್ಷಣಾ ಪಡೆಯಿಂದ ರಾಣಿ ಅಬ್ಬಕ್ಕಳಿಗೆ ಸ್ವಾತಂತ್ರ್ಯ ನಮನ

ಉಳ್ಳಾಲ : ಆ.13 ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲದ ರಾಣಿ ಅಬ್ಬಕ್ಕಳಿಗೆ ಭಾರತೀಯ ಕರಾವಳಿ ರಕ್ಷಣಾ ಪಡೆಯಿಂದ ಸ್ವಾತಂತ್ರ್ಯ ನಮನ ಸಲ್ಲಿಸಲಾಯಿತು.

ಉಳ್ಳಾಲ ಅಬ್ಬಕ್ಕ ವೃತ್ತದಲ್ಲಿ ವೀರರಾಣಿಗೆ ಕರಾವಳಿ ಕಾವಲು ಪಡೆಯ ಯೋಧರು 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೈಕ್ ರ‍್ಯಾಲಿ ನಡೆಸಿ ನಮನ ಸಲ್ಲಿಸಿದರು.ಶಾಸಕ ಯು.ಟಿ ಖಾದರ್ ಅವರು ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಧ್ವಜಾರೋಹಣ ಮಾಡಿದರು.

ಈ ವೇಳೆ ಮಾತನಾಡಿದ ಅವರು ಅಬ್ಬಕ್ಕ ರಾಣಿ ಉಳ್ಳಾಲದ ಹೆಮ್ಮೆಯ ಪ್ರತೀಕ.ಇಂದಿನಿಂದ ಸ್ವಾತಂತ್ರ್ಯ ದಿನಾಚರಣೆವರೆಗೂ ನಿತ್ಯವೂ ನಾಡಿನ ವಿವಿಧ ಸಂಘ ,ಸಂಸ್ಥೆಗಳಿಂದ ರಾಣಿ ಅಬ್ಬಕ್ಕಳಿಗೆ ನಮನ ಸಲ್ಲಿಸುವುದರೊಂದಿಗೆ ಧ್ವಜಾರೋಹಣ ಕಾರ್ಯಕ್ರಮ ಜರಗಲಿರುವುದು.

15 ರಂದು ಉಳ್ಳಾಲದ ಹೆಬ್ಬಾಗಿಲು ಓವರ್ ಬ್ರಿಡ್ಜ್ ನಲ್ಲಿ ಸ್ಥಾಪನೆಯಾದ ಜಿಲ್ಲೆಯಲ್ಲೇ ಅತೀ (110 ಅಡಿ)ಎತ್ತರದ ಧ್ವಜ ಸ್ಥಂಬದಲ್ಲಿ ವರ್ಣರಂಜಿತ ಕಾರ್ಯಕ್ರಮದೊಂದಿಗೆ ರಾಷ್ಟ್ರ ಧ್ವಜಾರೋಹಣ ನಡೆಯಲಿರುವುದೆಂದು ಹೇಳಿದರು.

ಅಕ್ಷರ ಸಂತ ,ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನ ಕರಾವಳಿ ರಕ್ಷಣಾ ಪಡೆಯ ಯೋಧರು ಈ ವೇಳೆ ಅಭಿನಂದಿಸಿದರು.

Edited By : Nagesh Gaonkar
Kshetra Samachara

Kshetra Samachara

13/08/2022 03:01 pm

Cinque Terre

5.64 K

Cinque Terre

0

ಸಂಬಂಧಿತ ಸುದ್ದಿ