ಕುಂದಾಪುರ : ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ಮತ್ತು ಹಸ್ತಚಿತ್ತ ಫೌಂಡೇಶನ್ ವಕ್ವಾಡಿ ಆಶ್ರಯದಲ್ಲಿ ವಕ್ವಾಡಿಯ ಫಾರ್ಚೂನ್ ವಿಲೇಜ್ ಹೋಟೆಲ್ ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ವಿ.ಕೆ ಐತಾಳ್ ಅವರ ಸ್ಮರಣಾರ್ಥ ಹರ್ ಘರ್ ಮೇ ತಿರಂಗಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರು, ವಕ್ವಾಡಿ ಗ್ರಾಮದಲ್ಲಿ ಪ್ರತಿ ಮನೆ ಹಾಗೂ ಸರಕಾರಿ ಕಚೇರಿಗಳು ಸೇರಿದಂತೆ ಇಡೀ ಗ್ರಾಮದಲ್ಲಿ ರಾಷ್ಟ್ರಧ್ವಜವನ್ನು 3 ದಿನಗಳ ಕಾಲ ಹಾರಿಸುವುದರ ಮೂಲಕ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ, ಮಾಜಿ ಸದಸ್ಯ ಸತೀಶ್ ಪೂಜಾರಿ ಕಾಠ್ಯಕ್ರಮದ ರೂಪುರೇಷೆಗಳ ಕುರಿತು ಅನಿಸಿಕೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ಹಸ್ತ ಚಿತ್ತ ಫೌಂಡೇಶನ್ ಅಧ್ಯಕ್ಷೆ ಶರ್ಮೀಳಾ ಕಾರಂತ್, ಕಾರ್ಯದರ್ಶಿ ಶಂಕರಮೂರ್ತಿ ಮಂಜ, ನಿವೃತ್ತ ಶಿಕ್ಷಕ ಕರುಣಾಕ ಶೆಟ್ಟಿ, ವಿಕೆ ಐತಾಳ್ ಕುಟುಂಬದವರಾದ ಲೀಲಾವತಿ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.ಗಿರೀಶ್ ಐತಾಳ್ ಸ್ವಾಗತಿಸಿದರು, ಸತೀಶ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ನಾಗರತ್ನ ಹೇರ್ಳೆ ಕಾಠ್ಯಕ್ರಮ ನಿರೂಪಿಸಿದರು, ಅಕ್ಷತಾ ಗಿರೀಶ್ ಐತಾಳ್ ವಂದಿಸಿದರು.
Kshetra Samachara
08/08/2022 06:45 pm