ಮುಲ್ಕಿ: ಹಳೆಯಂಗಡಿ ಇಂಡಿಯನ್ ಯೋಗ ಮಂದಿರದಲ್ಲಿ ವಿಜಯ ಮಾಸ್ಟರ್ ಟ್ರಸ್ಟ್ ಹಾಗೂ ಭಾರತದ ಕ್ರೈಸ್ತ ಚರ್ಚ್ ಒಕ್ಕೂಟದ ಸಹಯೋಗದಲ್ಲಿ ಶಾಂತಿ ಸಭೆ ಹಾಗೂ ಆರೋಗ್ಯ ಮಾಹಿತಿ ಶಿಬಿರ ನಡೆಯಿತು.
ಧರ್ಮಗುರುಗಳಾದ ರೆವೆ. ಮೆಲ್ವಿನ್ ಜಯಕರ್ ಮಾಬೆನ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕಳೆದ ಕೆಲ ದಿನಗಳಿಂದ ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಒಟ್ಟು ಮೂರು ಹತ್ಯೆಗಳಾಗಿವೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಜೆಗಳಾದ ನಾವೆಲ್ಲರೂ ಸಾಮರಸ್ಯ, ಶಾಂತಿ, ಸಹಬಾಳ್ವೆಯ ಮೂಲಕ ಭಾರತ ದೇಶದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಬೇಕಾಗಿದೆ ಎಂದರು ಸಭೆಯ ಅಧ್ಯಕ್ಷತೆಯನ್ನು ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟದ ಅಧ್ಯಕ್ಷರಾದ ಡೇನಿಯಲ್ ದೇವರಾಜ್ ವಹಿಸಿ ಮಾತನಾಡಿದರು>
ಶಾಂತಿ ಸಭೆಯಲ್ಲಿ ರೆವೆ. ವಿಲಿಯಮ್, ನ್ಯಾಯಾಂಗ ಇಲಾಖೆಯ ಮಹಮ್ಮದ್ , ನಿವೃತ್ತ ಪೊಲೀಸ್ ಅಧಿಕಾರಿ ಬೆಂಜಮಿನ್ ಎಸ್, ಮೈಸೂರು, ಸಮಾಜಸೇವಕ ರಘುರಾಮ್ ರಾವ್ , ಸಹನಾ, ನ್ಯಾನ್ಸಿ ಕರ್ಕಡ, ಶಿಕ್ಷಕಿ ಪ್ರಸನ್ನಿ , ವಕೀಲರು ಹಾಗೂ ಕಾನೂನು ನರವು ಕೇಂದ್ರದ ಗುರುಪ್ರಸಾದ್ ಭಟ್, ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ತಮಿಳುನಾಡು, ಭಾ.ಕ.ಚ ಒಕ್ಕೂಟ ಮನೋವೈದ್ಯ ರವರು ಡಾ.ನಿರ್ಮಿಲ“ಮನುಷ್ಯನ ಮನಸ್ಥಿತಿ ಹಾಗೂ ಶಾಂತಿ ಪಾಲನೆ” ಬಗ್ಗೆ ಮಾಹಿತಿ ನೀಡಿದರು.
ಭಾ.ಚ ಒಕ್ಕೂಟ ಕೇರಳ ಮಕ್ಕಳ ವೈದ್ಯೆ ಡಾ.ನಮಿತಾ ಡಿಸೋಜ “ಆರೋಗ್ಯ ಹಾಗೂ ಶಾಂತಿ” ಬಗ್ಗೆ ಮಾಹಿತಿ ನೀಡಿದರು.ಡಿಕ್ಸನ್ ನಿರೂಪಿಸಿದರು,ವಕೀಲ ಅಭಿಲಾಷ್ ಸ್ವಾಗತಿಸಿದರು, ಪಂಚಾಯತ್ ಸದಸ್ಯೆ ಸೋಫಿಯಾ ಶಾಂತಿ ಧನ್ಯವಾದ ಅರ್ಪಿಸಿದರು.
Kshetra Samachara
01/08/2022 03:10 pm