ಉಡುಪಿ: ರಜತೋತ್ಸವ ಸಂಭ್ರಮ ಮುಗಿಸಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವ ಬ್ರಾಹ್ಮಣ ಮಹಾ ಸಭಾ, ವಲಯ ಸಮಿತಿ ಕೊಡವೂರು ಕಳೆದ ಕೆಲವು ವರುಷಗಳಿಂದ ದೀವಿಗೆ ಅಮಾವಾಸ್ಯೆ ಅಂದರೆ ಆಟಿ ಅಮಾವಾಸ್ಯೆಯ ಯಂದು ಸಾರ್ವಜನಿಕರಿಗೆ ಔಷಧೀಯ ಗುಣವುಳ್ಳ ಹಾಲೆ ಕೆತ್ತೆಯ ಕಷಾಯ ವಿತರಣೆ ಸಮಾರಂಭ ನಡೆಸಿಕೊಂಡು ಬರುತ್ತಿದೆ.
ಈ ವರುಷ ವಿಪ್ರಶ್ರೀಯಲ್ಲಿ ಆಟಿ ಅಮಾವಾಸ್ಯೆ ದಿನದಂದು ಕೊಡವೂರು ಮೂಡುಬೆಟ್ಟುನಲ್ಲಿ ಉಪಾಧ್ಯಾಯ ಶುಶ್ರೂಷಾಲಯದ ಹಿರಿಯ ವೈದ್ಯರಾದ ಡಾ.ಮಂಜುನಾಥ ಉಪಾಧ್ಯಾಯ ರವರು ಕಷಾಯ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ನೆರೆದಿದ್ದ ಸಾರ್ವಜನಿಕರಿಗೆ ಕಷಾಯ ವಿತರಿಸಿದರು. ಈ ಸಂದರ್ಭದಲ್ಲಿ ಕೊಡವೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀನಿವಾಸ ಉಪಾಧ್ಯ,ಧಾರ್ಮಿಕ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್, ಕೋಶಾಧಿಕಾರಿ ಶ್ರೀಧರ ಶರ್ಮ, ಪದಾಧಿಕಾರಿಗಳಾದ ಚಂದ್ರಶೇಖರ ರಾವ್, ಸುಧೀರ್ ರಾವ್,ಮಂಜುನಾಥ ಭಟ್ ಉಪಸ್ಥಿತಿತರಿದ್ದರು. ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್ ಸ್ವಾಗತಿಸಿ ವಂದಿಸಿದರು.
Kshetra Samachara
28/07/2022 02:50 pm