ಕಟೀಲು: ಸಂಗೀತದಿಂದ ಆರೋಗ್ಯ, ನೆಮ್ಮದಿ ಸಾಧ್ಯ. ದೇವರನ್ನು ಒಲಿಸಲು ದಾಸ ಶ್ರೇಷ್ಟರು ಕಂಡುಕೊಂಡ ಸುಲಭದ ದಾರಿ ಸಂಗೀತ ಎಂದು ಕಟೀಲು ದೇಗುಲದ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಹೇಳಿದರು.
ಅವರು ಕಟೀಲು ಅಕ್ಷರಾನ್ನಂ ಸಭಾಂಗಣದಲ್ಲಿ ಕಟೀಲು ದೇಗುಲ, ಪ್ರಾಥಮಿಕ ಶಾಲೆ ಹಾಗೂ ಬಜಪೆಯ ಶಾಂತಿ ಕಲಾ ಕೇಂದ್ರದ ಸಹಯೋಗದಲ್ಲಿ ನಡೆದ ಎರಡು ದಿನಗಳ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಶಿಬಿರ ನಡೆಸಿಕೊಟ್ಟ ಖ್ಯಾತ ಸಂಗೀತಗಾರ್ತಿ ಪುತ್ತೂರಿನ ವಿದುಷಿ ಸುಚಿತ್ರಾ ಹೊಳ್ಳ ಅವರನ್ನು ಕಟೀಲು ದೇಗುಲದ ವತಿಯಿಂದ ಸಮಾನಿಸಲಾಯಿತು. ಅರ್ಚಕ ವೆಂಕಟರಮಣ ಶಾಂತಿ ಕಲಾ ಕೇಂದ್ರದ ವೇದಿಕೆಯಲ್ಲಿದ್ದರು. ಜ್ಯೋತಿ ಉಡುಪ ನಿರೂಪಿಸಿದರು. ಪುತ್ತೂರು ವಿಟ್ಲ ಬೆಂಗಳೂರು ಮಂಗಳೂರು ಹೀಗೆ ವಿವಿಧೆಡೆಗಳಿಂದ 70ರಷ್ಟು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
Kshetra Samachara
15/05/2022 05:39 pm