ಉಡುಪಿ: ಕಳೆದ ಕೆಲವು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಸಾಮರಸ್ಯ ಕದಡುವ ಶಕ್ತಿಗಳ ವಿರುದ್ಧ ಮತ್ತು ಸೌಹಾರ್ದ ಬಯಸುವ ಜನರಿಗೆ ಸಂದೇಶ ನೀಡಲು ಉಡುಪಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಮೇ.14 ರಂದು ಎರಡು ಗಂಟೆಗೆ ಸಾಮರಸ್ಯ ನಡಿಗೆ ಬಳಿಕ ಕ್ರಿಶ್ಚಿಯನ್ ಮೈದಾನದಲ್ಲಿ ನಾಲ್ಕು ಗಂಟೆಗೆ ಬೃಹತ್ ಸಹಬಾಳ್ವೆ ಸಮಾವೇಶ ನಡೆಯಲಿದೆ.ಸರ್ವಧರ್ಮಗಳ ಗುರುಗಳು ,ನಾಡಿನ ಚಿಂತಕರು ಸೌಹಾರ್ದ ಬಯಸುವ ಸಾವಿರಾರು ಜನ ಇದರಲ್ಲಿ ಭಾಗವಹಿಸಲಿದ್ದಾರೆ. ಸರ್ವಧರ್ಮ ದ ಗುರುಗಳು ನಾಡಿನ ಜನತೆ ಯನ್ನುದ್ದೇಶಿಸಿ ಅಂದು ಸೌಹಾರ್ದದ ಸಂದೇಶ ಸಾರಲಿದ್ದಾರೆ.
ಕರ್ನಾಟಕ ಈ ಹಿಂದಿನಂತೆ ಸರ್ವಜನಾಂಗದ ಶಾಂತಿಯ ತೋಟವಾಗಲು ಈ ಸಮಾವೇಶ ಪೂರಕವಾಗಿ ನಡೆಯಲಿದೆ ಎಂದು ಸಂಚಾಲಕಿ ,ವೆರೋನಿಕಾ ಕರ್ನೇಲಿಯೋ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.
Kshetra Samachara
12/05/2022 07:07 pm