ಮುಲ್ಕಿ:ತುಳುನಾಡಿನ ದೈವಗಳು ಕಾರಣಿಕವಾಗಿದ್ದು ಕೊಡೆತ್ತೂರು ಅರಸು ಕುಂಜಿರಾಯ ದೈವಸ್ಥಾನಕ್ಕೆ ಹಲವಾರು ವರ್ಷಗಳ ಇತಿಹಾಸ ಇದ್ದು ದೈವಸ್ಥಾನ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರ ಸಹಕಾರ ಬೇಕೆಂದು ಶಾಸಕ ಉಮನಾಥ್ ಕೋಟ್ಯಾನ್ ಹೇಳಿದರು.
ಕೊಡೆತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದಲ್ಲಿ ದೇವಸ್ಥಾನದ ಅಭಿವೃದ್ಧಿ ಹಾಗೂ ಬ್ರಹ್ಮಕಲಶೋತ್ಸವ ಹಾಗೂ ಅಂಗವಾಗಿ ನಡೆದ ಮಾಗಣೆಯ ಸಭೆಯಲ್ಲಿ ಮಾತನಾಡಿ ದೈವಸ್ಥಾನದ ಸರ್ವಾಂಗಿಣ ಅಭಿವೃದ್ಧಿ ಆಗಬೇಕಾಗಿದೆ. ಮಲ್ಲಿಗೆಯಂಗಡಿ ರಸ್ತೆಯನ್ನು ಅಭಿವೃದ್ಧಿ ಮಾಡಲಾಗಿದೆ ಕಾಂಕ್ರೀಟ್ ರಸ್ತೆಯ ಕೆಲಸ ಕಾರ್ಯ ಪ್ರಗತಿಯಲ್ಲಿ ಸಾಗುತ್ತಿದೆ. ದೈವಸ್ಥಾನದ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರ ಪರವೂರ ದಾನಿಗಳ ಸಹಕಾರ ಅಗತ್ಯವಿದೆ ಎಂದರು
ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ , ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಶ್ರೀಧರ ಶೆಟ್ಟಿ ಕೊಡೆತ್ತೂರು ಮಾಗಂದಡಿ, ಗಣೇಶ ಶೆಟ್ಟಿ ಮಿತ್ತಬೈಲುಗುತ್ತು , ವಿಜಯ ಶೆಟ್ಟಿ ಅಜಾರು ಗುತ್ತು , ಜಯರಾಮ ಶೆಟ್ಟಿ ಕೊಂಡೇಲಗುತ್ತು, ಮೋಹನ್ ಶೆಟ್ಟಿ ಮೂಡು ದೇವಸ್ಯ , ರವಿರಾಜ ಶೆಟ್ಟಿ ಬಾಳಿಕೆ ಮೆನೆ, ಜಯಂತ ಕೆರ್ಕೇರಾ ಅಡ್ಡಣ ಗುತ್ತು, ಸುಧಾಕರ ಶೆಟ್ಟಿ ಶಿಬರೂರು, ಪುರುಷೋತ್ತಮ ಶೆಟ್ಟಿ ಕೊಡೆತ್ತೂರು ಮತ್ತಿತರರು ಉಪಸ್ಥಿರಿದ್ದರು.
ದೈವಸ್ಥಾನದ ಜೀರ್ಣೋದ್ಧಾರದ ಹಿನ್ನಲೆಯಲ್ಲಿ ಸಮಿತಿಯ ಅಧ್ಯಕ್ಷರಾಗಿ ಸಂಸದ ನಳಿನ್ ಕುಮಾರ್ ಕಟೀಲು, ಕಾರ್ಯಧ್ಯಕ್ಷರಾಗಿ ಶಾಸಕ ಉಮನಾಥ್ ಕೋಟ್ಯಾನ್ ರವರನ್ನು ಗ್ರಾಮಸ್ಥರ ಒಮ್ಮತದ ಅಭಿಪ್ರಾಯದಂತೆ ಆಯ್ಕೆ ಮಾಡಲಾಯಿತು. ದೈವಸ್ಥಾನದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಪ್ರಸ್ತಾವಿಸಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
01/05/2022 07:15 pm