ಮುಲ್ಕಿ: ಮುಲ್ಕಿ ಸಮೀಪದ ಕವತ್ತಾರು ಅಬ್ಬಗ-ದಾರಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ ಹಾಗೂ ಹುಣ್ಣಿಮೆ ಸಿರಿಜಾತ್ರೆ ವಿಜೃಂಭಣೆಯಿಂದ ನಡೆಯಿತು.
ಎ.15 ಶುಕ್ರವಾರ ಕ್ಷೇತ್ರದಲ್ಲಿ ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ಪ್ರಾತಃಕಾಲ ವಿಶೇಷ ಪ್ರಾರ್ಥನೆ ದ್ವಜಾರೋಹಣ ನಡೆದು ರಾತ್ರಿ ಉತ್ಸವ ಬಲಿ ನಡೆಯಿತು. ಎ.16 ಶನಿವಾರ ಮಧ್ಯಾಹ್ನ ಗಣಯಾಗ, ಮಹಾಪೂಜೆ, ಮಹಾ ಅನ್ನಸಂತರ್ಪಣೆ, ರಾತ್ರಿ ಅಜಿಲರ ಮನೆಯಿಂದ ಭಂಡಾರ ಬಂದು ಶ್ರೀದೇವರ ಮಹಾಪೂಜೆ ನಡೆಯಿತು.
ರಾತ್ರಿ ಶ್ರೀ ದೇವರ ಉತ್ಸವ ಬಲಿ ಸಿರಿಗಳ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ಎ.17 ಭಾನುವಾರ ಬೆಳಿಗ್ಗೆ ತುಲಾಭಾರ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಅಂಬೋಡಿ(ಚೆಂಡು),ರಾತ್ರಿ ಉತ್ಸವ ಬಲಿ ನಡೆಯಿತು. ಈ ಸಂದರ್ಭ ದೇವಸ್ಥಾನದ ಮುಕ್ತೇಸರರು ಅರ್ಚಕ ಸಿಬ್ಬಂದಿವರ್ಗ ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
17/04/2022 09:10 am